ಹಾಸನ :
ಹೊಳೆ ನರಸೀಪುರ ತಾಲೂಕು ಸಿಗರನಹಳ್ಳಿಯಲ್ಲಿ ಮದ್ಯ ಸೇವನೆ ಚಾಲೆಂಜ್ ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ಸಂಜೆ ಈ ಘಟನೆ ನಡೆದಿದೆ. ತಿಮ್ಮೇಗೌಡ 60 ವರ್ಷ ಮೃತಪಟ್ಟಿರುವ ವ್ಯಕ್ತಿ. ಸಿಗರನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಕೃಷ್ಣೇಗೌಡ ಎಂಬುವವರು ನೀಡಿದ ಮದ್ಯವನ್ನು ದೇವರಾಜ್ ಮತ್ತು ತಿಮ್ಮೇಗೌಡ ಅರ್ಧ ಗಂಟೆಯಲ್ಲಿ 90 ಎಂಎಲ್ ನ 10 ಪ್ಯಾಕೆಟ್ ಮದ್ಯ ಸೇವನೆಗೆ ಚಾಲೆಂಜ್ ಮಾಡಿದ್ದಾರೆ. ತಿಮ್ಮೇಗೌಡ 90 ಎಂಎಲ್ ನ 10 ಪಾಕೆಟ್ ಮದ್ಯ ಸೇವಿಸಿದ್ದಾರೆ.
ನಂತರ ಅವರು ರಕ್ತ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಎತ್ತಿಕೊಂಡು ಹೋಗಿ ಮನೆಯಲ್ಲಿ ಮಲಗಿಸಿದ್ದಾರೆ. ಅವರು ಮಲಗಿದ್ದಲ್ಲೇ ಮೃತಪಟ್ಟಿದ್ದು ಈ ಸಂಬಂಧ ಅವರ ಪುತ್ರಿ ದೇವರಾಜ್ ಮತ್ತುಕೃಷ್ಣೆಗೌಡರ ಮೇಲೆ ದೂರು ದಾಖಲಿಸಿದ್ದಾರೆ.