ಬೆಳಗಾವಿ : ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ನೀಲವ್ವ ಎಂಬ ಮಹಿಳೆ ಅನಾರೋಗ್ಯ ಪೀಡಿತ ತನ್ನ ಮಗನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಗ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆದರೆ, ನೀಲವ್ವ ಅವರಿಗೆ ಸಂಬಂಧಿಕರು ಹಾಗೂ ಶವ ಸಂಸ್ಕಾರಕ್ಕೆ ಹಣ ಇಲ್ಲದೆ ಇರುವುದರಿಂದ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮಗನ ಶವವನ್ನು ಒಂದು ದಿನ ಇರಿಸಿ ವೈದ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ತಮ್ಮಲ್ಲಿ ಹಣ ಇಲ್ಲದೆ ಇರುವ ವಿಷಯವನ್ನು ಹಲವರ ಬಳಿ ತಿಳಿಸಿದ್ದಾರೆ. ಕೊನೆಗೂ ಮಾಜಿ ಮೇಯರ್ ವಿಜಯ ಮೋರೆ ಹಾಗೂ ಬೆಂಬಲಿಗರಿಗೆ ವಿಷಯ ಗೊತ್ತಾಗಿದೆ. ಅವರು ಧಾವಿಸಿ ಶವ ಸಂಸ್ಕಾರ ನೆರವೇರಿಸಿದ್ದಾರೆ.