ಖಾನಾಪುರ:
ಖಾನಾಪುರ ತಾಲೂಕು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆತ್ಮ ನಿರ್ಭರ ಅಭಿಯಾನ ಅಡಿಯಲ್ಲಿ ಸ್ವದೇಶಿ ವಸ್ತುಗಳ ಮಹತ್ವ ಬೂತ್ ಮಟ್ಟದ ಸಂಪರ್ಕ ಅಭಿಯಾನ ಕಾರ್ಯಗಾರ ನಡೆಸಲಾಯಿತು.
ಅಧ್ಯಕ್ಷತೆಯನ್ನು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಸ್ವದೇಶಿ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಬೆಳಗಾವಿ ಜಿಲ್ಲಾ ಅಭಿಯಾನದ ಸಂಚಾಲಕ ಮಹೇಶ್ ಮೋಹಿತೆ ಮಾತನಾಡಿ, ಅಕ್ಟೋಬರ್ 13 ರಿಂದ ಡಿಸೆಂಬರ್ 31 ರ ವರೆಗೆ ನಡೆಯುವ ಅಭಿಯಾನದಲ್ಲಿ ಸಮಗ್ರ ಮಾಹಿತಿ ಕಾರ್ಯಕರ್ತರ ವರೆಗೆ ಮುಟ್ಟುವ ಅವಶ್ಯಕತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ವಸ್ತುಗಳ ಬಗ್ಗೆ ಕೈಗೊಂಡಿರುವ ಮಹತ್ವವನ್ನು ಕಾರ್ಯಕರ್ತರು ತಮ್ಮ ಬೂತ್ ಗಳಲ್ಲಿ ಪ್ರತಿಯೊಬ್ಬರಿಗೆ ಮುಟ್ಟಿಸುವ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು
ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಸಂಜಯ್ ಕುಬಲ್, ಚೇತನ ಮನೆರೀಕರ್ ಮೊದಲಾದವರು ತಮ್ಮ ವಿಚಾರವನ್ನು ಮಂಡಿಸಿದರು.
ಇತ್ತೀಚೆಗೆ ನಡೆದ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಹೊಸ ಚುನಾಯಿತ ಸದಸ್ಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಶ್ರೀಕಾಂತ ಇಟಗಿ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ, ಲಕ್ಷ್ಮಣ ಜಂಜರಿ, ಲಕ್ಷ್ಮಣ ಬಾಮಣಿ, ಪಂಡಿತ ಓಗಳೆ, ಸುಂದರ ಕುಲಕರ್ಣಿ , ಮೋಹನ ಪಾಟೀಲ, ಸಂಜಯ ಪಾಟೀಲ, ಯಶವಂತ ಕಡೊಳ್ಳಿ, ಹನುಮಂತ ಪಾಟೀಲ, ಕಿಶೋರ್ ಹೆಬ್ಬಾಳ್ಕರ್, ಪ್ರಶಾಂತ ಲಕ್ಕೇಬೈಲ್ಕರ್, ಬಾಳಾಸಾಹೇಬ್ ಸಾವಂತ, ರಾಜು ಲಕ್ಕೇಬೈಲಕರ, ಸುನೀತಾ ಪಾಟೀಲ, ಕಲ್ಪನಾ ಸಾವಂತ, ಮಾರುತಿ ಕಮತಗಿ, ಕಲಮೇಶ ತಿಗಡಿ, ಶಿವಾನಂದ ಗೋಧೂಳಿ, ರಾಜು ರಪಾಟಿ, ಸುನಿಲ್ ಪ್ರಭು, ಸದಾನಂದ ಮಾಶೇಖರ, ಪುಂಡಲೀಕ, ಸಂಜಯ ಪಾಟೀಲ, ಫಕೀರ ಪವಾರ, ಸದಾನಂದ ಹೊಸೂರಕರ, ರಮೇಶ ಕೋಟಗಿ, ಆತ್ಮಾನಂದ ಪಾಟೀಲ, ರವಿ ಪಾಟೀಲ, ತಾಲೂಕಿನ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಲ್ಲಪ್ಪ ಮಾರಿಹಾಳ ಸ್ವಾಗತಿಸಿದರು. ಖಾನಾಪುರ ತಾಲೂಕು ಅಭಯಾನ ಸಂಚಾಲಕ ಸದಾನಂದ ಪಾಟೀಲ ವಂದಿಸಿದರು.