ಬೆಳಗಾವಿ : ವಿಚ್ಛೇದಿತ ಪತ್ನಿಯ ಕೊಂದ ಪತಿಯನ್ನು ಬೆಳಗಾವಿ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸವದತ್ತಿಯ ರಾಮಾಪುರ ಸೈಟ್ ನಲ್ಲಿ ಅಕ್ಟೋಬರ್ 13 ರಂದು ಕೆ ಎಸ್ ಆರ್ ಟಿ ಸಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆತನ ವಿಚ್ಛೇದಿತ ಪತ್ನಿ ಕಾಶವ್ವ ಕರಿಕಟ್ಟಿ(34)ಎಂಬವರನ್ನು ಕೊಲೆಗೈಯ್ಯಲಾಗಿತ್ತು. ನಿಪ್ಪಾಣಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸಂತೋಷ ಕಾಂಬಳೆ (35)ಕೊಲೆ ಮಾಡಿದ್ದ. ಆದರೆ ಆತ ನಿಪ್ಪಾಣಿಯಲ್ಲಿ ಕಾನ್ಸ್ಟೇಬಲ್ ಆಗಿದ್ದರೂ ಕರ್ತವ್ಯದಲ್ಲಿ ಇರಲಿಲ್ಲ. ಈ ಹಿಂದೆಯೂ ಕಾಶವ್ವ ಅವರನ್ನು ಕೊಲೆ ಮಾಡುವ ಯತ್ನ ನಡೆಸಿ ಅಮಾನತುಗೊಂಡು ಇಲಾಖೆಯ ವಿಚಾರಣೆ ಎದುರಿಸುತ್ತಿದ್ದ ಎಂದು ಭೀಮಶಂಕರ್ ಗುಳೇದವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಇವರ ಮಗನನ್ನು ಪಡೆಯುವ ಸಲುವಾಗಿ ಜಗಳ ಸಂಭವಿಸುತ್ತಿತ್ತು. ಅದೇ ಘಟನೆಗೆ ಕಾರಣ ಆಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ಮಾಹಿತಿ ನೀಡಿದರು.