ಬೆಂಗಳೂರು: ರಾಜ್ಯದ ಒಟ್ಟು 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸರ್ಕಾರ, ವಿಜಯಪುರ, ಯಾದಗಿರಿ ಜಿಲ್ಲಾಧಿಕಾರಿಗಳನ್ನು ಬದಲಿಸಿದ್ದು, ಉತ್ತರ ಕನ್ನಡ, ರಾಯಚೂರು, ಬಾಗಲಕೋಟೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಗಳ ಸಿಇಒಗಳನ್ನೂ ಬದಲಾವಣೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಗಳ ಸಿಇಒ ಅಗಿದ್ದ ಡಾ.ಕೆ.ಆನಂದ್ ಅವರನ್ನು ವಿಜಯಪುರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರನ್ನು ಬೆಂಗಳೂರಿನ ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಜೆಹೇರಾ ನಸೀಮ್ (ಕಲಬುರಗಿ ಪ್ರಾದೇಶಿಕ ಆಯುಕ್ತೆ), ಟಿ.ಭೂಬಳಾನ್ (ಇ-ಗವರ್ನೆನ್ಸ್ ಕೇಂದ್ರದ ಸಿಇಒ), ಡಾ.ಬಿ.ಸುಶೀಲಾ (ಕೆಕೆಆರ್ಟಿಸಿ ಎಂಡಿ), ಡಾ.ಕೆ.ಆನಂದ್ (ವಿಜಯಪುರ ಜಿಲ್ಲಾಧಿಕಾರಿ), ಪಂಡ್ವೆ ರಾಹುಲ್ ತುಕಾರಾಂ (ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ), ಭೋಯಾರ್ ಹರ್ಷಾಲ್ ನಾರಾಯಣರಾವ್ (ಯಾದಗಿರಿ ಜಿಲ್ಲಾಧಿಕಾರಿ), ಡಾ.ದಿಲೀಶ್ ಸಸಿ (ಉತ್ತರ ಕನ್ನಡ ಜಿಪಂ ಸಿಇಒ), ಈಶ್ವರ್ ಕುಮಾರ್ ಕಂಡೂ (ರಾಯಚೂರು ಜಿಪಂ ಸಿಇಒ), ಶಶಿಧರ್ ಕುರೇರಾ (ಕೆಯುಐಡಿಎಫ್ಸಿ ಜಂಟಿ ವ್ಯವಸ್ಥಾಪಕ ನಿರ್ದೇಶಕ), ಡಾ.ಎಸ್.ಆಕಾಶ್ (ಬಾಗಲಕೋಟೆ ಜಿಪಂ ಸಿಇಒ), ಅಪರ್ಣಾ ರಮೇಶ್ (ಇಡಿಸಿಎಸ್ ನಿದೇಶಕಿ ಹಾಗೂ ಹಣಕಾಸು ಇಲಾಖೆ ಎಚ್ರ್ಎಂಎಸ್ 2.0 ಉಪನಿರ್ದೇಶಕಿ), ನರವಾಡೆ ವಿನಾಯಕ ಕಾರಭಾರಿ (ದಕ್ಷಿಣ ಕನ್ನಡ ಜಿಪಂ ಸಿಇಒ), ಆರ್.ಯತೀಶ್ (ಬೆಂಗಳೂರು ನಗರ ಜಿಪಂ ಸಿಇಒ).