ಪತ್ರಕರ್ತರಿಗೆ ಸಮಾಜದಲ್ಲಿ ವಿಶೇಷ ಗೌರವ ಮನ್ನಣೆ ಇದೆ. ಪ್ರಜಾಪ್ರಭುತ್ವದ ನಾಲ್ಕನೇ ಬಹುಮುಖ್ಯ ಅಂಗವಾಗಿರುವ ಪತ್ರಿಕೋದ್ಯಮದಲ್ಲಿ ಇಂದು ನೈಜ ಪತ್ರಕರ್ತರಿಗಿಂತ ನಕಲಿ ಪತ್ರಕರ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪತ್ರಕರ್ತರ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್
ಮಾಡಿಕೊಂಡು ಅದರ ದುರುಪಯೋಗ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು ಸಮಾಜದಲ್ಲಿ ಅನಾರೋಗ್ಯಕರ ಬೆಳವಣಿಗೆಗಳಿಗೆ ಕಾರಣವಾಗಿದೆ . ನೈಜ ಪತ್ರಕರ್ತರು ಯಾರು ನಕಲಿ ಪತ್ರಕರ್ತರು ಯಾರು ಎಂದು ಗುರುತಿಸುವುದು ಕಠಿಣವಾಗಿತ್ತು .ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಸರಕಾರ ಕೊನೆಗೂ ಎಚ್ಚೆತ್ತುಕೊಂಡಂತಿದೆ.
ಬೆಂಗಳೂರು :
ಯೂಟ್ಯೂಬ್ ಚಾನೆಲ್ ಮಾಡುವವರಿಗೆ ಸರಕಾರ ಇದೀಗ ಲಗಾಮು ಹಾಕಲು ಮುಂದಾಗಿದೆ.
ಯೂಟ್ಯೂಬ್ ನಲ್ಲಿ ಸುದ್ದಿ ಚಾನೆಲ್ ಮಾಡಿ ದುರ್ಬಳಕೆ ಮಾಡಿಕೊಳ್ಳುವವರಿಗೆ ಇನ್ನು ಮುಂದೆ ಕಡಿವಾಣ ಹಾಕಲು ಸರಕಾರ ಉದ್ದೇಶಿಸಿದೆ. ಬೇಕಾಬಿಟ್ಟಿಯಾಗಿ ವರದಿ ಹಾಕುವವರ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿರುವ ಸರಕಾರ ಅಂತಹ ಚಾನೆಲ್ ನಡೆಸುವವರ ಸಮಗ್ರ ಮಾಹಿತಿ ಕಲೆ ಹಾಕಲು ತೀರ್ಮಾನಿಸಿದೆ. ಈ ಮೂಲಕ
ಸಾರ್ವಜನಿಕರಿಗೆ ತಲೆನೋವಾಗಿರುವ ಕೆಲ ಯೂಟ್ಯೂಬ್ ಚಾನಲ್ ಗಳಿಗೆ ದಂಡಾಸ್ತ್ರ ಹಾಕಲು ಸರಕಾರ ನಿರ್ಧರಿಸಿರುವುದು ಉತ್ತಮ ಬೆಳವಣಿಗೆ.
ಯೂಟ್ಯೂಬ್ ನ್ಯೂಸ್ ಚಾನಲ್ ಗಳಿಗೆ ಕಡಿವಾಣ ಹಾಕಲು ಸರಕಾರ ಗಂಭೀರ ಚಿಂತನೆ ನಡೆಸಿದೆ. ನಿರಂತರ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪ್ರತಿಯೊಂದು ಜಿಲ್ಲೆಯ ಪೊಲೀಸರಿಂದ ಸಮಗ್ರ ಮಾಹಿತಿ ಸಂಗ್ರಹಿಸಲು ಮುಂದಾಗುತ್ತಿದೆ.
ಯೂಟ್ಯೂಬ್ ಚಾನೆಲ್ ಗಳ ಹೆಸರು ಹೇಳಿಕೊಂಡು ಅಧಿಕಾರಿಗಳಿಂದ ಹಣ ವಸೂಲಿ ಮಾಡುವುದು, ಅವರನ್ನು ಬೆದರಿಸುವುದು, ಅನುಮತಿ ಪಡೆಯದೆ ಸರಕಾರಿ ಕಚೇರಿ ಪ್ರವೇಶಿಸಿ ಚಿತ್ರೀಕರಿಸುವುದು, ಜನಪ್ರತಿನಿಧಿಗಳನ್ನು ಗುರಿಯಾಗಿಸಿಕೊಂಡು ಮಾನಹಾನಿಕಾರ ವರದಿ ಪ್ರಸಾರ ಮಾಡುವುದು ಮುಂತಾದ ಚಟುವಟಿಕೆ ತಡೆಯಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ. ನೋಂದಣಿಯಾಗದ ನ್ಯೂಸ್ ಚಾನೆಲ್ ಗಳಿಗೆ ಬಿಸಿ ಮುಟ್ಟಿಸಲು ಶೋಕಾಸ್ ನೋಟಿಸ್ ಜಾರಿಗೆ ಸರ್ಕಾರ ಮುಂದಾಗಿದೆ. ನ್ಯೂಸ್ ಚಾನೆಲ್ ನಡೆಸುತ್ತಿರುವವರು ಯಾರು, ಅವರು ಯಾರಿಂದ ಅನುಮತಿ ಪಡೆದಿದ್ದಾರೆ ಅವರ ಹಿನ್ನಲೆ ಏನು ಎಂಬ ಬಗ್ಗೆ ಪೊಲೀಸರು ಇದೀಗ ಮಾಹಿತಿ ಪಡೆದುಕೊಳ್ಳಲು ಆರಂಭಿಸಿದ್ದಾರೆ. ಯೂಟ್ಯೂಬ್ ವೇದಿಕೆಯಲ್ಲಿ 1ವಿಷಯ ಎಡಿಟ್ ಮಾಡಿ ಪ್ರಸಾರ ಮಾಡಬೇಕಾದರೆ ಟ್ರೇಡ್ ಮಾರ್ಕ್ ನೋಂದಣಿ ಕಡ್ಡಾಯ. ಜತೆಗೆ ಯೂಟ್ಯೂಬ್ ನ್ಯೂಸ್ ಚಾನೆಲ್ ನಡೆಸಲು ಪ್ರತಿಯೊಬ್ಬರು ಟ್ರೇಡ್ ಮಾರ್ಕ್ ನೋಂದಣಿ ಜಿಎಸ್ ಟಿ ಸಂಖ್ಯೆ ಲೆಕ್ಕ ಪರಿಶೋಧನೆ ಮಾಡಿಸಬೇಕು. ನೋಂದಣಿ ಮಾಡಿಸದಿದ್ದರೆ ಅಂತಹ ಚಾನೆಲ್ ಗಳನ್ನು ನಕಲಿ ಚಾನಲ್ ಎಂದು ಪರಿಗಣಿಸಲಾಗುತ್ತದೆ.
ಫೇಸ್ ಬುಕ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕಾದರೆ ನೋಂದಣಿ ಅಗತ್ಯ. ನೋಂದಣಿ ಬಳಿಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಯೂಟ್ಯೂಬ್ ನಲ್ಲಿ ಈ ಮೇಲ್ ಐಡಿ ಮತ್ತು ಆಧಾರ್ ಸಂಖ್ಯೆ ಇದ್ದರೆ ಯಾರು ಬೇಕಾದರೂ ಚಾನೆಲ್ ಮಾಡಬಹುದು. ತಮ್ಮ ವೈಯಕ್ತಿಕ ವೀಡಿಯೋಗಳನ್ನು ಅಪ್ ಲೋಡ್ ಮಾಡಲು ಯಾವ ಅನುಮತಿ ಬೇಕಾಗಿಲ್ಲ. ಯಾವುದೇ ಎಡಿಟ್ ಮಾಡಿ ಕೊಳ್ಳದೆ ಯಾವುದನ್ನೇ ಆಗಲಿ. ನೈಜ ವೀಡಿಯೋ ಹಾಕುವವರಿಗೆ ತೊಂದರೆಯಿಲ್ಲ. ಆದರೆ ಯೂಟ್ಯೂಬ್ ನಿಂದ ಬರುವ ಆದಾಯ ಸಂದರ್ಭದಲ್ಲಿ ಅಕೌಂಟ್ ಸಂಖ್ಯೆ ಪ್ಯಾನ್ ಕಾರ್ಡ್ ಅನಿವಾರ್ಯ. ಸರಕಾರದ ಸೂಚನೆ ಅನ್ವಯ ಜಿಲ್ಲೆಯಲ್ಲಿ ಯೂಟ್ಯೂಬ್ ಚಾನಲ್ ಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ನೋಂದಣಿ ಯಾಗಿರುವ ರನ್ನು ಖಚಿತಪಡಿಸಲಾಗುತ್ತಿದೆ. ಜತೆಗೆ ಚಾನೆಲ್ ಗಳಲ್ಲಿ ಪ್ರಸಾರ ಮಾಡುತ್ತಿರುವ ವಿಷಯಗಳ ಬಗ್ಗೆ ಪರಿಶೀಲಿಸುತ್ತಿದ್ದು ಸಾರ್ವಜನಿಕ ಶಾಂತಿ ಭಂಗ ಮತ್ತು ಖಾಸಗಿತನ ಧಕ್ಕೆಯಾಗುವ ವರದಿ ಪ್ರಸಾರವಾದರೆ
ಶೋಕಾಸ್ ನೋಟಿಸ್ ನೀಡಲು ಇದು ಇದೀಗ ಪೊಲೀಸ್ ಇಲಾಖೆ ಸಜ್ಜಾಗುತ್ತಿದೆ.