ಬೆಂಗಳೂರು :
ಶಾಲಾ ಪಾಠ ಪುಸ್ತಕಗಳನ್ನು ಸಂಪೂರ್ಣವಾಗಿ ಪರಿಷ್ಕರಿಸುವ ವಿಚಾರವನ್ನು ಕೈ ಬಿಡಲು ಸರಕಾರ ತೀರ್ಮಾನಿಸಿದೆ.
ಈ ವರ್ಷದ ಮಟ್ಟಿಗೆ ಕೆಲವು ವಿವಾದಿತ ಪಠ್ಯ ಗಳತ್ತ ಗಮನಹರಿಸಿ ಅವುಗಳ ಬೋಧನೆ ಮಾಡಿದಂತೆ ಆದೇಶ ನೀಡಲು ನಿರ್ಧರಿಸಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ್ ಕಂಬಾರ ರವರು ಸಿಎಂ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಈ ವಿಚಾರ ಚರ್ಚೆಗೆ ಬಂದಿದ್ದು ಸಮಗ್ರ ಪಠ್ಯ ಪರಿಷ್ಕರಣೆಗೆ ಮುಂದಿನ ವರ್ಷ ಸಮಿತಿ ರಚಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಈ ವರ್ಷ ಈಗಾಗಲೇ ಅಗತ್ಯ ಪ್ರಮಾಣದ ಪುಸ್ತಕಗಳನ್ನು ಮುದ್ರಣ ಹಾಗೂ ಶಾಲೆಗಳಿಗೆ ನೀಡಲಾಗಿದ್ದು, ಪುಸ್ತಕಗಳನ್ನು ವಾಪಸ್ ಪಡೆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಈ ವರ್ಷದ ಮಟ್ಟಿಗೆ ಸಂಪೂರ್ಣ ಪಠ್ಯ ಪರಿಷ್ಕರಣೆ ವಿಚಾರ ಇಲ್ಲ ಎನ್ನಲಾಗುತ್ತಿದೆ.