ಮೈಸೂರು: ರಾಜ್ಯ ಹಾಗೂ ರಾಷ್ಟ್ರದಲ್ಲಿ ಅಧಿಕಾರದಲ್ಲಿ ಇರುವವರಿಗೆ ತೊಂದರೆಯಾಗಬಹುದು ಎಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಭುವಿಷ್ಯ ಹೇಳಿದ್ದಾರೆ.
ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಹೇಳಿರುವ ಸ್ವಾಮೀಜಿ ರಾಜ್ಯ ಸರ್ಕಾರವೂ ಆಗಿರಬಹುದು, ಕೇಂದ್ರ ಸರ್ಕಾರವೂ ಆಗಬಹುದು. ಅಧಿಕಾರದ ಸ್ಥಾನದಲ್ಲಿರುವವರಿಗೆ ಆಪತ್ತು ಬರಬಹುದು ಎಂಬರ್ಥದಲ್ಲಿ ಹೇಳಿದ್ದಾರೆ.
ಮೈಸೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಅರಸನ ಅರಮನೆಗೆ ಕಾರ್ಮೋಡ ಕವಿದೀತು, ಆದರೆ ಅದಕ್ಕೆ ಪರಹಾರ ಮಾಡಿಕೊಂಡರೆ ಸರಿಯಾದೀತು. ಮುಂದಾಗುವ ಸಮಸ್ಯೆಗಳನ್ನು ಅರಿತುಕೊಂಡು ಈಗಲೇ ಪರಿಹಾರ ಮಾಡಿಕೊಂಡರೆ ಸೂಕ್ತ. ಇಲ್ಲವಾದಲ್ಲಿ ಸಮಸ್ಯೆ ಇದೆ ಎಂದು ಪರಿಹರಿಸುವ ಮಾರ್ಗೋಪಾಯದ ಬಗ್ಗೆಯೂ ಹೇಳಿದ್ದಾರೆ. ಭಾರತದಲ್ಲಿ ದೊಡ್ಡ ಆಘಾತ ಆಗುವ ಲಕ್ಷಣ ಇದೆ. ವಿಶ್ವವೇ ತಿರುಗಿ ನೋಡುವಂತಹ ಆಘಾತ ಆಗಬಹುದು ಎಂದು ಹೇಳಿದ್ದಾರೆ.
ಸಂಕ್ರಾಂತಿ ಮೇಲೆ ಒಂದು ಭವಿಷ್ಯ, ಯುಗಾದಿಯ ಮೇಲೆ ಒಂದು ಭವಿಷ್ಯ ನಿರ್ಧಾರ ಆಗಲಿದೆ. ಯುಗಾದಿ ನಂತರ ಮಳೆ, ಬೆಳೆ ಬಗ್ಗೆ ನಿರ್ಧಾರ ಆಗುತ್ತದೆ. ಸಂಕ್ರಾಂತಿ ಸಮಯದಲ್ಲಿ ಆಡಳಿತ, ರಾಜಕಾರಣ ಇತ್ಯಾದಿಗಳ ಫಲ ನೋಡಿಕೊಂಡು ಹೇಳುತ್ತೇವೆ. ಸಂಕ್ರಾಂತಿವರೆಗೆ ಏನು ತೊಂದರೆ ಇಲ್ಲ. ಆಮೇಲೆ, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.
ಯುದ್ಧಗಳು ಮುಂದುವರಿಯಲಿವೆ…
ಜಾಗತಿಕವಾಗಿ ಯುದ್ಧದ ಪರಿಸ್ಥಿತಿಗಳು ಜಾಗತಿಕವಾಗಿ ಮುಂದುವರಿಯುವ ಸಾಧ್ಯತೆ ಇದೆ. ಕದನ ವಿರಾಮಗಳು ಆಗಿದ್ದರೂ, ಮನಸುಗಳು ನಿಂತಾಗ ಮಾತ್ರ ಯುದ್ಧ ನಿಲ್ಲುತ್ತದೆ. ಮನಸು ಮನಸುಗಳ ಬೆಸೆಯುವ ಕೆಲಸ ಆದರೆ ಯುದ್ಧ ನಿಲ್ಲುತ್ತದೆ ಎಂದು ಹೇಳಿದ್ದಾರೆ. 84 ಲಕ್ಷ ಜೀವ ರಾಶಿಗಳಲ್ಲಿ ಆತ್ಮ ಕಡೆಯದಾಗಿದ್ದು, ಮಾನವನಿಗೆ ಜ್ಞಾನ ಹಾಗೂ ವಿವೇಕ ನೀಡಲಾಗಿದೆ. ಇದನ್ನು ಸನ್ಮಾರ್ಗದಲ್ಲಿ ಬಳಸಿಕೊಂಡಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಧ್ಯಾನ ಕೇಂದ್ರಗಳು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಬೆಳವಣಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.