ಹುಬ್ಬಳ್ಳಿ :
ಮುಂದಿನ ವಿಧಾನಸಭಾ ಚುನಾವಣೆಗೆ ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಇದುವರೆಗೆ ಕೇಳಿಬಂದ ಊಹಾಪೋಹಗಳಿಗೆ ತೆರೆ ಎಳೆದರು.
ಕಳೆದ ಚುನಾವಣೆ ವೇಳೆ ನಾನು ಸ್ಪರ್ಧಿಸುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು, ರಾಜ್ಯಪಾಲನಾಗಿ ಬೇರೆ ಕಡೆ
ಹೋಗುತ್ತೇನೆ ಎಂಬ ಮಾತು ಕೇಳಿಬಂದಿದ್ದವು. ಇದೀಗ ಸಹ ಅಂತ ಮಾತು ಮತ್ತೆ ಕೇಳಿಬರುತ್ತಿದೆ. ಆದರೆ, ಅವೆಲ್ಲ ಊಹಾಪೋಹ.
ಮುಂದಿನ ಬಾರಿಯೂ ನಾನೇ ಕಣಕ್ಕಿಳಿಯುವೆ ಎಂದು ಅವರು ತಿಳಿಸಿದರು.