ಬೆಳಗಾವಿ: ಬೆಳಗಾವಿಯ ಹಿಂಡಾಲ್ಕೋ ಫ್ಯಾಕ್ಟರಿ ಆವರಣದಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಎಂಬ ವರದಿ ಸುಳ್ಳು ಎಂದು ಅರಣ್ಯ ಇಲಾಖೆಯ ಸ್ಪಷ್ಟಪಡಿಸಿದೆ. ಹುಲಿ ಓಡಾಟದ ದೃಶ್ಯ ಅಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ. ಕಲ್ಲೋಳಿಕರ್ ಅವರು, ಹುಲಿ ಪ್ರತ್ಯಕ್ಷ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ, ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದ್ದಾರೆ. ಆದರೆ ಯಾವುದೇ ಕುರುಹು ಇದುವರೆಗೆ ಲಭಿಸಿಲ್ಲ. ಊಹಾಪೋಹದ ಬಗ್ಗೆ ಜನ ಆತಂಕ ಪಡಬೇಕಾಗಿಲ್ಲ, ಅರಣ್ಯ ಇಲಾಖೆಯ ಜೊತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.