ಜನ ಜೀವಾಳ ಜಾಲ ಬೆಳಗಾವಿ:“ಅರಣ್ಯ ಇಲಾಖೆಯವರೇ…! ಬನ್ನಿ ಬದುಕಿಸಿ… ಹದ್ದು ಮೀರಿದವು…!; ಬಾರದಾಗಿವೆ.. ವಾರವಾಯ್ತು…!!” ತಲೆಬರಹದ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆ ಕೊನೆಗೂ ಹದ್ದುಗಳನ್ನು ಬಂಧಮುಕ್ತಗೊಳಿಸಿದೆ. “ಜನ ಜೀವಾಳ” ವರದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ತತಕ್ಷಣ ಗಮನ ಹರಿಸಿ ಸ್ಪಂದಿಸಿದ್ದಾರೆ. ಕಾರ್ಯಾಚರಣೆ ಮಾಡಿದ ಬಗ್ಗೆ ಚಿತ್ರ ಸಮೇತ DFO ಶಂಕರ ಕಲ್ಲೋಳಕರ ಜನಜೀವಾಳ ಕ್ಕೆ ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಇಲ್ಲಿನ ಕಾಂಟೋನ್ಮೆಂಟ್ ಶಾಲಾ ಆವರಣದ ನೆಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ
ಸುಮಾರು ಏಳೆಂಟು ಹದ್ದುಗಳು ಸಿಕ್ಕಿಕೊಂಡು ಆಹಾರ ಇಲ್ಲದೇ ಮೂಕವೇದನೆ ಅನುಭವಿಸುತ್ತಿದ್ದರೂ ಸರಕಾರದ ಸಂಬಂಧಿತ ಇಲಾಖೆ ಗಮನಿಸಿರಲಿಲ್ಲ.
ಕ್ಯಾಂಟೋನ್ಮೆಂಟ್ ಶಾಲೆಯ ಟರ್ಪ್ ಆಟದ ಮೈದಾನದ ಒಂದು ಮೂಲೆಯಲ್ಲಿ ನೆಟ್ ಹರಿದು ಹೋಗಿದ್ದು ಅದರ ಮೂಲಕ ಒಳಗೆ ಹೋಗಿ ಕಳೆದ ಏಳು ದಿನಗಳಿಂದ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವ ಐದು ಹದ್ದುಗಳು ಅವುಗಳನ್ನು ರಕ್ಷಿಸಲು ಶಾಲೆ ಹಾಗೂ ಆಫೀಸಿನ ಎಲ್ಲ ಸಿಬ್ಬಂದಿಗಳು ಪ್ರಯತ್ನಿಸಿದ್ದರು.
ಸಿಬ್ಬಂದಿಗಳಾದ RFO ಪುರುಷೋತ್ತಮ,Dyrfo ವಿನಯ, ಸಿದ್ಧಾರ್ಥ, ಮಲ್ಲಿಕಾರ್ಜುನ , ಚಾಲಕ ಮೊಹಮ್ಮದ, ಕಾವಲುಗಾರರಾದ ಈಶ್ವರ, ಸಾಧಿಕ ಶೇಖ ಹಾಗೂ ಕಾಂಟೋನ್ಮೆಟನ ಮಾಜಿ ಸದಸ್ಯರು ಕೂಡ ಈ ಕಾರ್ಯಾಚರಣೆಗೆ ಸಾಥ್ ನೀಡಿದರು.