ಜನ ಜೀವಾಳ ಜಾಲ: ಬೆಳಗಾವಿ: ಕಾಂಗ್ರೆಸ್ ಬಿಡುಗಡೆಗೊಳಿಸಿದ ಎರಡೂ ಪಟ್ಟಿಗಳಲ್ಲಿ ಕುರುಬರಿಗೆ ಮಾನ್ಯತೆ ನೀಡಿಲ್ಲ ಎಂದು ಮಕನಾಪುರ ಗುರುಪೀಠದ ಶ್ರೀ ಸೊಮೇಶ್ವರ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ದೊಡ್ಡದಿದ್ದು, ಕುರುಬ ಸಮಾಜ ದೊಡ್ಡ ಪ್ರಮಾಣದಲ್ಲಿ ಹರಡಿಕೊಂಡಿದೆ.
ಈಗಾಗಲೇ ರಾಮದುರ್ಗ, ಸವದತ್ತಿ, ಅರಭಾವಿ & ಅಥಣಿ ಕ್ಷೇತ್ರಗಳಲ್ಲಿ ಕುರುಬ ಸಮಾಜದ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಟಿಕೇಟ್ ಬಯಸಿದ್ದಾರೆ, ಹೀಗಿದ್ದಾಗೂ ಕಾಂಗ್ರೆಸ್ ತನ್ನ ಎರಡೂ ಪಟ್ಟಿಗಳಲ್ಲಿ ಕುರುಬ ಮುಖಂಡರಿಗೆ ಟಿಕೇಟ್ ಘೋಷಿಸದಿರುವುದು ಗಮನ ಸೆಳೆದಿದೆ.
ಎರಡನೇ ಪಟ್ಟಿಯಲ್ಲಿ ಸಹ ಬೆಳಗಾವಿ ಜಿಲ್ಲೆಯ ಅರಭಾವಿ ಮತಕ್ಷೇತ್ರದ ಟಿಕೇಟ್ ಹಂಚಿಕೆ ಮುಂದೂಡಿರುವುದರ ಹಿಂದೆ ಕಾಣದ ಕೈಗಳ ಷಡ್ಯಂತ್ರ ನಡೆಯುತ್ತಿರುವ ಭಾಸ ಮೂಡಿದೆ. ಅರಭಾವಿ ಕ್ಷೇತ್ರದಲ್ಲಿ ಪ್ರತಿಭಾವಂತರಾದ ಅರವಿಂದ ಎಂ. ದಳವಾಯಿ ಕಾಂಗ್ರೆಸ್ ಪಕ್ಷ ಕಟ್ಟುತ್ತ ಬಂದಿದ್ದಾರೆ. ಪಕ್ಷವನ್ನು ಬೇರು ಸಹಿತ ಬೆಳೆಸಲು ಹಗಲಿರುಳು ಶ್ರಮ ಪಟ್ಟಿದ್ದಾರೆ. ಪಕ್ಷಕ್ಕಾಗಿ ಅವರು ದುಡಿದ ಶ್ರಮವನ್ನು ಗಮನಿಸಿ ಕಾಂಗ್ರೆಸ್ ಪಕ್ಷ ಅರವಿಂದ ದಳವಾಯಿ ಅವರಿಗೆ ಟಿಕೇಟ್ ಘೋಷಿಸಬೇಕು. ಬೆಳಗಾವಿ ಜಿಲ್ಲೆಯ ಇತರ ಕ್ಷೇತ್ರಗಳಲ್ಲೂ ಕುರುಬ ಸಮಾಜದ ಅಭ್ಯರ್ಥಿಗಳಿಗೆ ಟಿಕೇಟ್ ಕೊಡಲೆಬೇಕು ಎಂದು ಸ್ವಾಮೀಜಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ. ಕುರುಬ ಸಮಾಜವನ್ನು ನಿರ್ಲಕ್ಷಿಸುವ ಯತ್ನ ಮಾಡಿದರೆ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ಸಹ ಸಮಾಜ ಚಿಂತನೆ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.