ಕರ್ನಾಟಕ ಸರ್ಕಾರಿ ನೌಕರರ ಸಂಘದ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿದೆ.ಸಮಸ್ತ ಬೆಳಗಾವಿ ಜಿಲ್ಲೆಯ ನೌಕರರು ಮತ್ತು ಶಿಕ್ಷಕರು ಗಮನಿಸಲು ವಿನಂತಿ.
ನೌಕರರ ಸಂಘದಲ್ಲಿರುವ ನಮ್ಮ ಜಿಲ್ಲೆಯ ಕೆಲವರು ಮತ್ತು ಬೆಂಗಳೂರಿನಲ್ಲಿ ಕುಳಿತಿರುವ ಕೆಲವು ಮಹಾನ್ ನಾಯಕರು ಎಂದು ಭಾವಿಸಿಕೊಂಡಿರುವವರು. ಬೆಳಗಾವಿ ಜಿಲ್ಲೆಯನ್ನು ನೌಕರ ಸಂಘದ ಚುನಾವಣೆಯಿಂದ ದೂರವಿಡುವ ಯೋಚನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಕಾರಣ ಇಟ್ಟುಕೊಂಡು, ಯೋಚನೆ ಮತ್ತು ಯೋಜನೆ ಹಾಕಿಕೊಂಡಿದ್ದಾರೆ (ಹುನ್ನಾರ ನಡೆದಿದೆ).. ಹೀಗೆ ಮಾಡಲು ಪ್ರಬಲ ಕಾರಣ ಈಗಿರುವ ರಾಜ್ಯದ್ಯಕ್ಷರಿಗೆ ಬೆಳಗಾವಿ ಜಿಲ್ಲೆ ಮತ್ತು ಇಲ್ಲಿಯ ನೌಕರರು ಮತ್ತು ನಾಯಕರು ಅಂದರೆ ಒಂತರಾ ಭಯ..!
ಬೆಳಗಾವಿ ಜಿಲ್ಲೆಯ ನೌಕರರ ಸಂಘದ ಮೂರು ವರ್ಷದ ನೌಕರರ ವಂತಿಕೆ 60 ಲಕ್ಷ ರೂಪಾಯಿ ಹಣವನ್ನು ರಾಜ್ಯ ಸಂಘದವರು ಬೆಳಗಾವಿ ಜಿಲ್ಲಾ ಸಂಘಕ್ಕೆ ನೀಡಿರುವುದಿಲ್ಲ._
ಒಂದು ವೇಳೆ ಬೆಳಗಾವಿ ಹೊರತು ಪಡಿಸಿ ರಾಜ್ಯದ ಚುನಾವಣೆ ಮಾಡುವುದು. ಸತ್ಯವೇ ಆದರೆ ಬೆಳಗಾವಿ ಜಿಲ್ಲೆಯ ಸ್ವಾಭಿಮಾನಿ ನೌಕರರು ಮತ್ತು ಶಿಕ್ಷಕರು ಮತ್ತು ಪ್ರತಿ ಹಂತದಲ್ಲಿಯೂ ಮೌನ ವಹಿಸುವುದು ಬೇಡ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅಡ್ಡ ದಾರಿ ಹಿಡಿದು ಅಧಿಕಾರ ಪಡೆಯಲು ಅವಕಾಶವಿರುವುದಿಲ್ಲ.
ತಮ್ಮ ಶಾಲೆ ಮತ್ತು ಕಚೇರಿಗಳಲ್ಲಿ ಈ ವಿಷಯ ಚರ್ಚೆಯಾಗಲಿ. ಅಂತಹ ಸಂದರ್ಭ ಬಂದರೆ ಸಂಘಟಿತರಾಗಿ ಬೆಳಗಾವಿ ಜಿಲ್ಲೆಗೆ ಚುನಾವಣೆ ಮಾಡಿಸೋಣ. ಪ್ರಬಲ ಪೈಪೋಟಿಯಿಂದ ಆರೋಗ್ಯಯುತ ಸ್ಪರ್ಧೆಯಿಂದ ಚುನಾವಣೆ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ.
_ಕೆ.ಎಸ್. ರಾಚಣ್ಣವರ, ಬೆಳಗಾವಿ.