
ಜನ ಜೀವಾಳ ಜಾಲ :ಬೆಳಗಾವಿ :
ನಗರದ ಜನತೆಗೆ ಬೆಳಂ ಬೆಳಗ್ಗೆ ಆನೆಯೊಂದು ಕಾಣಿಸಿಕೊಂಡಿದೆ. ಶಾಹೂ ನಗರಕ್ಕೆ ನಸುಕಿನ ಜಾವ ಬಂದಿದ್ದ ಆನೆ ನಂತರ ಕಂಗ್ರಾಳಿ, ರಸ್ತೆ ಮೇಲೆ ಬಂದು ಅಲತಗೆ ಗ್ರಾಮದ ಹೊಲಗಳಲ್ಲಿ ಹಾಯ್ದು ಉಚಗಾವಿ ಕಡೆ ಸಾಗುತ್ತಿದೆ.
ಕಾಕತಿ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಹಿಡಿಯಲು ಬಲೆ ಹರಸಾಹನ ಪಡುತ್ತಿದ್ದಾರೆ.
ಈ ನಡುವೆ ಮೊದಲ ಬಾರಿಗೆ ಕಾಡಾನೆಯೊಂದು ನಗರದಲ್ಲಿ ನುಗ್ಗಿದ್ದರಿಂದ ಜನ ಆಶ್ಚರ್ಯಚಕಿತರಾಗಿ, ಭಯಭೀತರಾಗಿದ್ದಾರೆ. ಇನ್ನೂ ಕೆಲವರು ಆನೆ ನೋಡಲು ದುಂಬಾಲು ಬಿದ್ದಿದ್ದಾರೆ.
ಈ ಆನೆ ಎರಡು ದಿನಗಳ ಹಿಂದೆ ಬೆಳಗಾವಿ ಗಡಿಯಲ್ಲಿರುವ ಮಹಾರಾಷ್ಟ್ರದ ಕೋವಾಡ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು.
ಆನೆ ಬಂತು ಆನೆ ಬೆಳಗಾವಿಗೆ ಬಂತು ಆನೆ..! ನಗರಕ್ಕೆ ಎಲ್ಲಿಂದ ಬಂತು ಕಾಡಾನೆ…!
