ಬೆಳಗಾವಿ: ಹುಕ್ಕೇರಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಂಕೇಶ್ವರದ ಅಕ್ಕಮಹಾದೇವಿ ಕನ್ಯಾ ಶಾಲೆ ವತಿಯಿಂದ ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಅವರ ಮಾತೋಶ್ರೀಯವರಾದ ಲಿಂಗೈಕ್ಯ ಶ್ರೀಮತಿ ದುಂಡವ್ವಾ ಸಿದ್ದಯ್ಯ ಸ್ವಾಮಿ ಗವಿಮಠ ಅವರ ಪುಣ್ಯ ಸ್ಮರಣೋತ್ಸವ ನಿಮಿತ್ತ ವಿಶೇಷ ದತ್ತಿನಿಧಿ ಉಪನ್ಯಾಸವನ್ನು ಅ.26 ರಂದು ಬೆಳಗ್ಗೆ 9.30 ಕ್ಕೆ ಸಂಕೇಶ್ವರ ಅಕ್ಕಮಹಾದೇವಿ ಕನ್ಯಾಸಂಘದಲ್ಲಿ ಏರ್ಪಡಿಲಾಗಿದೆ.
ಸಂಕೇಶ್ವರ ಎಸ್ಡಿವಿಎಸ್ ಸಂಘದ ಕಾರ್ಯದರ್ಶಿ ಬಿ.ಸಿ. ಕೋಟಗಿ ಉದ್ಘಾಟಿಸುವರು. ಎಸ್ಡಿವಿಎಸ್ ಸಂಘದ ಉಪಾಧ್ಯಕ್ಷ ಕೆ.ಸಿ.ಶಿರಕೋಳಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಪ್ರಕಾಶ ಗಿರಿಮಲ್ಲನ್ನವರ ಅವರು ಮಾತೃದೇವೋಭವ ವಿಷಯವಾಗಿ ಉಪನ್ಯಾಸ ನೀಡುವರು. ನ್ಯಾಯವಾದಿ ಜಿ.ಎಸ್. ಇಂಡಿ, ಎಕೆಎಚ್ಎಸ್ ಪ್ರಭಾರಿ ಮುಖ್ಯೋಪಾಧ್ಯಾಯ ಆರ್.ಬಿ. ಪಾಟೀಲ, ಸಾಹಿತಿಗಳಾದ ಡಾ.ಜಿ.ಎಸ್. ಮರಿಗುದ್ದಿ, ಬಸವರಾಜ ಗಾರ್ಗಿ, ಹಮೀದಾ ದೇಸಾಯಿ, ಎಸ್ ಡಿವಿಎಸ್ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ಅವಲಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.