ಬೆಳಗಾವಿ: ಸವದತ್ತಿ ಪಟ್ಟಣದ ನಿವಾಸಿ ರುದ್ರಗೌಡ ವೀರನಗೌಡ ಇನಾಮತಿ(81) ಭಾನುವಾರ ರಾತ್ರಿ ವಯೋಸಹಜವಾಗಿ ನಿಧನರಾದರು.
ಅವರಿಗೆ ಪತ್ನಿ, ಪತ್ರಿಕಾ ಛಾಯಾಗ್ರಾಹಕ ವೀರನಗೌಡ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವಿದೆ.
ರುದ್ರಗೌಡ ಅವರು ಬೆಳಗಾವಿಯ ಜಿ.ಎ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಸವದತ್ತಿಯ ರುದ್ರಭೂಮಿಯಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.