ನಿಂಗ್ಯಾನಟ್ಟಿ ಗೌರವ್ವಾ ಅಪ್ಪಯ್ಯಾ ಹುದ್ದಾರ ನಿಧನ.
ಬೆಳಗಾವಿ : ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ ಪ್ರತಿಷ್ಠಿತ ಜಮೀನ್ದಾರು, ಉದ್ಯಮಿ, ಸಮಾಜ ಸೇವಕ, ರಾಜಕಾರಣಿ ಬಸಗೌಡ ಅಪ್ಪಯ್ಯಾ ಹುದ್ದಾರ ಇವರ ತಾಯಿ ಹುದ್ದಾರ ಕಟುಂಬದ ಹಿರಿಯ ಜೀವಿ ಶತಾಯುಷಿ ಸಾಮೀಪ್ಯದಲ್ಲಿದ್ದ ಶ್ರೀ ಗೌರವ್ವಾ ಅಪ್ಪಯ್ಯಾ ಹುದ್ದಾರ ಇವರು ಇಂದು ಲಿಂಗೈಕ್ಯರಾದರು.
97 ವರ್ಷದ ಇವರು ಶತಾಯುಷಿ ಸಾಮೀಪ್ಯದಲ್ಲಿದ್ದರು. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ದಿ 18 ಮಾರ್ಚ್ 2025 ರಂದು ಮುಂಜಾನೆ 9.30 ಕ್ಕೆ ಸ್ವಗೃಹದಲ್ಲಿ ನಿಧನರಾದರು.
ಇವರಿಗೆ ಒರ್ವ ಪುತ್ರ, ಆರು ಜನ ಸುಪುತ್ರಿಯರು, ಸೊಸೆ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮದ ತೋಟದ ಹೊಲದಲ್ಲಿ ನೇರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ , ಹಲವು ಗ್ರಾಮದ ಜನಪ್ರತಿನಿಧಿಗಳು, ಹಿರಿಯರು, ಸಮಾಜ ಸೇವಕರು, ರಾಜಕಾರಣಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.