ಹಿರೇಬಾಗೇವಾಡಿ ಬಳಿ ಭೀಕರ ರಸ್ತೆ ಅಪಘಾತ ; ಗೋಕಾಕ ಮಹಿಳೆ ಸಾವು..!
ನಜ್ಜುಗುಜ್ಜಾದ ಕಾರು, ಇಬ್ಬರು ಪ್ರಾಣಾಪಾಯದಿಂದ ಪಾರು.
ಬೆಳಗಾವಿ : ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಡೆಕೊಳ್ಳಮಠ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಗೋಕಾಕ ತಾಲೂಕಿನ ಮಹಿಳೆಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂಬು ಬೆಳಗಿನ ಜಾವ ಸಂಭವಿಸಿದೆ.
32 ವರ್ಷದ ಆಶಾ ಭೀಮಪ್ಪ ಕೋಳಿ ಮೃತಪಟ್ಟವರು. ಇವರು ಪತಿಯೊಂದಿಗೆ ಧಾರವಾಡ ಕಡೆಯಿಂದ ಬೆಳಗಾವಿಗೆ ಬರುತ್ತಿರುವಾಗ ಹಿರೇಬಾಗೇವಾಡಿ ಗ್ರಾಮದ ಬಡೆಕೊಳ್ಳಮಠದ ಕ್ಯಾಟಲ್ ವಾಕ್ ಬ್ರೀಡ್ಜ್ ಹತ್ತಿರ ಮುಂದೆ ಹೊರಟಿದ್ದ ಗೂಡ್ಸ್ ವಾಹನಕ್ಕೆ ಅತಿ ವೇಗದಿಂದ ಡಿಕ್ಕಿ ಹೊಡೆದ ಪರಿಣಾದ ಮಂದೆ ಕುಳಿತಿದ್ದ ಆಶಾ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಇನ್ನೂ ಪತಿ ಭೀಮಪ್ಪ ಯಲ್ಲಪ್ಪ ಕೊಳಿಗೆ ಎದೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಹಾಗೂ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಘಟನೆ ಸ್ಥಳಕ್ಕೆ ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಧಾವಿಸಿ, ರಸ್ತೆ ಸಂಚಾರ ಸುಗಮಗೊಳಿಸಿ, ಗಯಾಳುಗಳನ್ಮು ಆಸ್ಪತ್ರೆಗ ಸೇರಿಸಿ, ಘಟನೆ ಬಗ್ಗೆ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.