ಬೆಳಗಾವಿ : ಸಕ್ಕರೆ ಮೂಟೆ ತುಂಬಿದ್ದ ಲಾರಿ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವಂತಹ ಆಘಾತಕಾರಿ ಘಟನೆ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ.
ಸಕ್ಕರೆ ತುಂಬಿದ್ದ ಲಾರಿ ರಾಮದುರ್ಗದ ಮುದಕವಿ ಗುಡ್ಡದ ತಿರುವಿನಲ್ಲಿ ಪಲ್ಟಿಯಾಗಿ ಬಿದ್ದಿದೆ. ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೂ ಮೂವರಿಗೆ ಗಂಭೀರವಾದ ಗಾಯಗಳಾಗಿವೆ.
ಮೃತರನ್ನು ಬಾಲಪ್ಪ ಮುದಕವಿ, ಯಲ್ಲವ್ವ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

 
             
         
         
        
 
  
        
 
    