ಬೆಂಗಳೂರು : ಮುಡಾ ಹಗರಣ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ರಾಜ್ಯಪಾಲ ತಾವರ್ ಚಂದ ಗೆಹಲೋಟ್ ಇದೀಗ ಮಧ್ಯಪ್ರದೇಶ ಮಾಡಿದ್ದು ತಕ್ಷಣ ವರದಿ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ.
ಮುಡ ಹಗರಣದಲ್ಲಿ ಸ್ವತಃ ಸಿದ್ದರಾಮಯ್ಯ ಅವರ ಹೆಸರು ತಳಕು ಹಾಕಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಅರ್ಹತೆಗೂ ಮೀರಿ ಎರಡು ಕೋಟಿ ರೂಪಾಯಿ ಬೆಲೆಬಾಳುವ 14 ನಿವೇಶನಳನ್ನು ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ ಹಂಚಲಾಗಿದೆ. ನಿಯಮ ಪ್ರಕಾರ ಅವರಿಗೆ ನೀಡಬೇಕಾಗಿರುವುದು ಕೇವಲ ಎರಡು ಜಮೀನು. ಆದರೆ 14 ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಗಂಭೀರವಾಗಿ ಆರೋಪಿಸಿವೆ. ಆದರೆ ಸಿದ್ದರಾಮಯ್ಯ ಅವರು ನಿಯಮದ ಪ್ರಕಾರ ಎಲ್ಲರಿಗೂ ಹಂಚಿಕೆಯಾಗುವಂತೆ ಮುಡಾದಿಂದ ಸೈಟ್ ಹಂಚಿಕೆಯಾಗಿದ್ದು ನಾವು ಯಾವುದೇ ತಪ್ಪು ಮಾಡಿಲ್ಲ. ಅಲ್ಲೇ ಸೈಟ್ ನೀಡಬೇಕೆಂದು ಕೇಳಿಕೊಂಡಿಲ್ಲ. ಮುಡಾದವರು ಹಂಚಿದ್ದು ಯಾವ ಅಕ್ರಮ ನಡೆಸಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ 50: 50 ಅನುಪಾತದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂಬ ಆರೋಪ ಪ್ರತಿಧ್ವನಿಸುತ್ತಿದ್ದು, ಪ್ರಾಧಿಕಾರ ನಿಯಮಬಾಹಿರವಾಗಿ ನಿವೇಶನ ಹಂಚಿಕೆ ಮಾಡಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಆರೋಪಿಸಿವೆ. ಮುಖ್ಯಮಂತ್ರಿ ಅವರ ಕುಟುಂಬಸ್ಥರ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಹೀಗಾಗಿ ಪ್ರಕರಣ ಸಂಚಲನಕ್ಕೆ ಕಾರಣವಾಗಿದೆ.