ನವದೆಹಲಿ: ಗೂಗಲ್ ಪ್ಲೇ ಸ್ಟೋರ್ನಿಂದ 119 ಚೀನೀ ಅಪ್ಲಿಕೇಶನ್ಗಳನ್ನು ತೆಗೆದುಹಾಕಲು ಸೂಚನೆ ನೀಡುವ ಮೂಲಕ ಸರ್ಕಾರವು ಮತ್ತೊಂದು ಡಿಜಿಟಲ್ ಕಾರ್ಯಾಚರಣೆ ಪ್ರಾರಂಭಿಸಿದೆ.
ಈ ಅಪ್ಲಿಕೇಶನ್ಗಳು ಚೀನಾ ಮತ್ತು ಹಾಂಗ್ ಕಾಂಗ್ನ ಡೆವಲಪರ್ಗಳ ಜೊತೆ ಸಂಪರ್ಕ ಹೊಂದಿವೆ, ನಿರ್ಬಂಧಿಸಿದ ಅಪ್ಲಿಕೇಶನ್ಗಳಲ್ಲಿ ಹಲವು ವೀಡಿಯೊ ಮತ್ತು ಧ್ವನಿ ಚಾಟ್ ಪ್ಲಾಟ್ಫಾರ್ಮ್ಗಳು ಸೇರಿವೆ. ಈ ಎಲ್ಲಾ ಅಪ್ಲಿಕೇಶನ್ಗಳು ಭಾರತದ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದ್ದವು. ಈ ಅಪ್ಲಿಕೇಶನ್ಗಳು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುತ್ತದೆ ಎಂಬ ಆತಂಕದ ನಂತರ ಈ ಕ್ರಮವು ಬಂದಿದೆ. ಈ ಮೊದಲು ಟಿಕ್ಟಾಕ್ ಮತ್ತು ಶೇರ್ ಇಟ್ನಂತಹ ಜನಪ್ರಿಯ ಅಪ್ಲಿಕೇಶನ್ಗಳನ್ನು ಒಳಗೊಂಡಂತೆ ನೂರಾರು ಚೀನೀ ಅಪ್ಲಿಕೇಶನ್ಗಳನ್ನು ನಿರ್ಬಂಧಿಸುವ ಮೂಲಕ ಭಾರತವು 2020 ರಲ್ಲಿ ಡಿಜಿಟಲ್ ನಿಷೇಧವನ್ನು ಪ್ರಾರಂಭಿಸಿತು.
ಮನಿ ಕಂಟ್ರೋಲ್ನ ವರದಿ ಪ್ರಕಾರ, ಇಷ್ಟೊಂದು ದೊಡ್ಡ ಸಂಖ್ಯೆಯ ಮೊಬೈಲ್ ಆ್ಯಪ್ಗಳನ್ನು ನಿಷೇಧಿಸುವ ನಿರ್ಧಾರ 2020 ರ ನಂತರ ಇದೇ ಮೊದಲ ಬಾರಿ ಆಗಿದೆ. 2020 ರಲ್ಲಿ ಸಹ, ಕೇಂದ್ರ ಸರ್ಕಾರವು ಚೀನಾದ ಅಪ್ಲಿಕೇಶನ್ಗಳ ಮೇಲೆ ನಿಷೇಧವನ್ನು ಪ್ರಕಟಿಸಿತ್ತು. ಈ ಬಾರಿಯೂ ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಲಾಗಿದೆ.
ಚೀನೀ ಅಪ್ಲಿಕೇಶನ್ಗಳ ಮೇಲಿನ ಈ ನಿಷೇಧವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ಐಟಿ ಕಾಯಿದೆ 69A ಅನ್ನು ಜಾರಿಗೊಳಿಸಿತು. ನಿಷೇಧಿತ ಪಟ್ಟಿಯಲ್ಲಿರುವ ಕೆಲವು ಅಪ್ಲಿಕೇಶನ್ಗಳನ್ನು ಸಿಂಗಾಪುರ, ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾ ದೇಶದ ಕಂಪನಿಗಳು ಅಭಿವೃದ್ಧಿಪಡಿಸಿವೆ.
ವರದಿಯ ಪ್ರಕಾರ, ಭಾರತ ಸರ್ಕಾರವು ಈ ಅಪ್ಲಿಕೇಶನ್ಗಳಿಗೆ ಸಾರ್ವಜನಿಕ ಪ್ರವೇಶವನ್ನು ಸ್ಥಗಿತಗೊಳಿಸಿದೆ ಮತ್ತು 119 ರಲ್ಲಿ 15 ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ, ಇನ್ನೂ ಹಲವಾರು ಪ್ರವೇಶಿಸಬಹುದಾಗಿದೆ.
ನಿಭಾರತ ಸರ್ಕಾರ ನಿರ್ಬಂಧಿಸಿದ 119 ಅಪ್ಲಿಕೇಶನ್ಗಳಲ್ಲಿ, ಕೇವಲ ಮೂರು ಅಪ್ಲಿಕೇಶನ್ಗಳ ಹೆಸರು ಮಾತ್ರ ರಿವೀಲ್ ಆಗಿದೆ. ಇವುಗಳಲ್ಲಿ ಸಿಂಗಾಪುರ ಮೂಲದ ವಿಡಿಯೋ ಚಾಟ್ ಮತ್ತು ಗೇಮಿಂಗ್ ಪ್ಲಾಟ್ಫಾರ್ಮ್ ಚಿಲ್ಚಾಟ್, ಚೀನೀ ಡೆವಲಪರ್ ಚಾಂಗ್ ಆ್ಯಪ್ ಮತ್ತು ಆಸ್ಟ್ರೇಲಿಯಾದ ಅಪ್ಲಿಕೇಶನ್ ಹನಿಕಾಂಬ್ ಸೇರಿವೆ. ಭದ್ರತಾ ಕಾರಣಗಳಿಗಾಗಿ ನಿಷೇಧಿಸಲಾದ ಅಪ್ಲಿಕೇಶನ್ಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ.