ಹಮೀದಪುರ : ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಹಮೀದಪುರ ಗ್ರಾಮದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಊಟ ಬಡಿಸಲು ತಡವಾದ ಕಾರಣಕ್ಕೆ ವರನೊಬ್ಬ ತನ್ನ ಮದುವೆ ಅರ್ಧಕ್ಕೆ ನಿಲ್ಲಿಸಿ ಹೊರನಡೆದಿದ್ದಾನೆ ಎಂದು ವರದಿಯಾಗಿದೆ. ಅಸಮಾಧಾನಗೊಂಡ ವರನು ತನ್ನ ಸಂಬಂಧಿಕರ ಜೊತೆ ಅಸಮಾಧಾನಗೊಂಡು ಮದುವೆ ಮಂಟಪದಿಂದ ಹೊರನಡೆದಿದ್ದಾನೆ. ಮದುವೆಯ ಉಡುಪಿನಲ್ಲಿ ಕಾಯುತ್ತಿದ್ದ ವಧು ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ.
ರೊಟ್ಟಿ ಬಡಿಸುವಲ್ಲಿ ವಿಳಂಬ ವಿವಾದಕ್ಕೆ ಕಾರಣ
ವರದಿಗಳ ಪ್ರಕಾರ, ವಧುವಿನ ವಿವಾಹವನ್ನು ಮೆಹ್ತಾಬ್ ಎಂಬ ಯುವಕನೊಂದಿಗೆ ಏಳು ತಿಂಗಳ ಹಿಂದೆ ಏರ್ಪಡಿಸಲಾಗಿತ್ತು. ಡಿಸೆಂಬರ್ 22 ರಂದು, ಮದುವೆಯ ಸಂಭ್ರಮವು ಬಹಳ ಉತ್ಸಾಹದಿಂದ ಪ್ರಾರಂಭವಾಯಿತು. ವಧುವಿನ ಕುಟುಂಬವು ಮದುವೆ ದಿಬ್ಬಣವನ್ನು ಸಂಭ್ರಮದಿಂದ ಸ್ವಾಗತಿಸಿತು ಮತ್ತು ನಂತರ ಅವರಿಗೆ ಊಟೋಪಚಾರ ನಡೆಯಿತು. ಆದರೆ, ವರನ ಕಡೆಯ ಒಬ್ಬರು ರೊಟ್ಟಿಯನ್ನು ತಡವಾಗಿ ಬಡಿಸಲಾಯಿತುಎಂದು ಆರೋಪಿಸಿ ವಿವಾದಕ್ಕೆ ಕಾರಣರಾದರು.
ಮದುವೆ ಸಂಭ್ರಮಾಚರಣೆ ವೇಳೆ ಜಗಳ…
ವರನ ಕಡೆಯವರನ್ನು ವಧುವಿನ ಬಂಧುಗಳು ಸಮಾಧಾನಪಡಿಸುವ ವ್ಯರ್ಥ ಪ್ರಯತ್ನಗಳನ್ನು ನಡೆಸಿದರು. ಮದುವೆ ದಿಬ್ಬಣದವರು ವಧುವಿನ ಕುಟುಂಬದ ಜೊತೆ ಜಗಳವಾಡಿದರು. ವರನು ರಾತ್ರಿಯಲ್ಲಿ ಅಲ್ಲಿಂದ ಕಣ್ಮರೆಯಾಗಿದ್ದಾನೆ ಮತ್ತು ಸ್ವಲ್ಪ ಸಮಯದ ನಂತರ ಸಂಬಂಧಿಯನ್ನು ಮದುವೆಯಾಗಿದ್ದಾನೆ ಎಂದು ವರದಿಯಾಗಿದೆ. ಈ ಸುದ್ದಿ ವಧುವಿನ ಕುಟುಂಬಕ್ಕೆ ತೀವ್ರ ಘಾಸಿ ಉಂಟು ಮಾಡಿತು. ಮತ್ತು ಅವರು ದೂರು ನೀಡಲು ನಿರ್ಧರಿಸಿ ಇಂಡಸ್ಟ್ರಿಯಲ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ಅವರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಡಿ.24ರಂದು ಪೊಲೀಸ್ ವರಿಷ್ಠಾಧಿಕಾರಿಗೆ ಸಹಾಯ ಕೋರಿದರು.
ವರದಕ್ಷಿಣೆ ಆರೋಪಗಳು
ವಧುವಿನ ಕುಟುಂಬವು ವರನ ಮನೆಗೆ ಕಳುಹಿಸಲಾದ ವರದಕ್ಷಿಣೆಯಲ್ಲಿ 1.5 ಲಕ್ಷ ರೂಪಾಯಿ ಸೇರಿದಂತೆ 7 ಲಕ್ಷ ರೂಪಾಯಿಗಳ ವೆಚ್ಚವಾಗಿದೆ ಹೇಳಿಕೊಂಡಿದೆ. ವರನ ಕಡೆಯ ಐದು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮದುಮಗಳೇ ಎಸ್ಪಿಗೆ ಮನವಿ ಮಾಡಿದರು. ವಧುವಿನ ಸಹೋದರ ರಾಜು ಅವರು ತಮಗೆ ಎಸ್ಪಿ ಕ್ರಮದ ಭರವಸೆ ನೀಡಿದ್ದಾರೆ. ಹಾಗೂ ಪೊಲೀಸರಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. . ಸ್ಥಳೀಯ ಪೊಲೀಸರ ನಿಷ್ಕ್ರಿಯತೆಯನ್ನು ಅವರು ದೂರಿದ್ದಾರೆ.