ಬೆಳಗಾವಿ: ಹುಕ್ಕೇರಿ ತಾಲೂಕು ನೋಗಿನಹಾಳ ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ದಂಪತಿ ಚಲಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ನದಿಗೆ ಉರುಳಿ ಬಿದ್ದು ನೀರು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸುರೇಶ ಬಡಿಗೇರ (53) ಮತ್ತು ಅವರ ಧರ್ಮಪತ್ನಿ ಜಯಶ್ರೀ (45) ನೀರುಪಾಲಾದವರು. ಜಯಶ್ರೀ ಅವರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಿಂದ ಹೊರಗೆ ತೆಗೆದಿದ್ದಾರೆ. ಸುರೇಶ ಅವರ ಹುಡುಕಾಟ ನಡೆದಿದೆ. ಘೋಡಗೇರಿಯಿಂದ ಪೊಗತ್ಯಾನಟ್ಟಿ ಗ್ರಾಮಕ್ಕೆ ದಂಪತಿ ಬೈಕ್ ನಲ್ಲಿ ತೆರಳುವಾಗ ನೋಗಿನಹಾಳ ಗ್ರಾಮದ ಬಳಿ ಘಟಪ್ರಭಾ ನದಿಗೆ ಕಟ್ಟಿರುವ ಸೇತುವೆಯಲ್ಲಿ ಏಕಾಏಕಿ ನದಿಗೆ ಬೈಕ್ ಉರುಳಿದೆ. ಸುರೇಶ ಅವರಿಗೆ ಹುಡುಕಾಟ ನಡೆದಿದೆ.