ಬೆಳಗಾವಿ: ಖಾನಾಪುರ ತಾಲೂಕು ಯಡೋಗಾ ಗ್ರಾಮದ ಶುಭಂ ಕುಪ್ಪಟಗಿರಿ (18)ಎಂಬ ಯುವಕ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗಿದ್ದ. ಕೊನೆಗೂ ಈ ಯುವಕನ ಶವ 48 ಗಂಟೆಗಳ ನಂತರ ಪತ್ತೆಯಾಗಿದೆ.
ಶನಿವಾರ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಶುಭಂ ಮಲಪ್ರಭಾ ನದಿಯಲ್ಲಿ ಮುಳುಗಿ ಹೋಗಿದ್ದ. ಪೊಲೀಸರು ಈತನಿಗೆ ಹುಡುಕಾಟ ನಡೆಸಿದ್ದರು. ಶನಿವಾರ ಮಧ್ಯಾಹ್ನದ ಸುಮಾರಿಗೆ ಶುಭಂ ತಂದೆ ಮತ್ತು ಇತರರು ಗಣೇಶ ಮೂರ್ತಿ ವಿಸರ್ಜನೆಗೆ ಮಲಪ್ರಭಾ ನದಿಗೆ ತೆರಳಿದ್ದರು. ನದಿ ನೀರು ಹರಿವು ಹೆಚ್ಚಾಗಿತ್ತು. ಈಜುಗಾರನಾಗಿದ್ದರೂ ತನ್ನ ಜೀವ ಉಳಿಸಿಕೊಳ್ಳುವಲ್ಲಿ ಸಾಧ್ಯವಾಗಲೇ ಇಲ್ಲ.
ಖಾನಾಪುರ ಮತ್ತು ನಂದಗಡ ಪೊಲೀಸರು ಶನಿವಾರ ಹಾಗೂ ಭಾನುವಾರ ಹುಡುಕಾಟ ನಡೆಸಿದ್ದರು. ಕೊನೆಗೂ ಸೋಮವಾರ ಮಧ್ಯಾಹ್ನ 3:30 ರ ಸುಮಾರಿಗೆ ಶುಭಂ ಶವ ನದಿ ಪಾತ್ರದ ಕಲ್ಲಿನ ತಳಪದ ಬಳಿ ತೇಲುತ್ತಿರುವುದು ಕಂಡು ಬಂದಿದೆ ಪೊಲೀಸರು ಶವವನ್ನು ಖಾನಾಪುರ ಆಸ್ಪತ್ರೆಗೆ ಸಾಗಿಸಿ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.