ಬೆಳಗಾವಿ :
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಗೃಹಜ್ಯೋತಿ ಯೋಜನೆ ಜಾರಿಗೊಂಡಿದೆ. ಆದರೂ, ಗ್ರಾಹಕರಿಗೆ ಬಿಲ್ ಬರುವ ಪರದಾಟ ಮಾತ್ರ ತಪ್ಪಿಲ್ಲ.
ಇಲ್ಲಿನ ಶಾಹುನಗರ ನಿವಾಸಿಯೊಬ್ಬರಿಗೆ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಈ ಸಲ ಬರೋಬ್ಬರಿ ₹503.00 ಬಿಲ್ ನೀಡಲಾಗಿದೆ.
ಫಲಾನುಭವಿಗಳು ಗೃಹಜೋತಿ ಯೋಜನೆ ಅಡಿ ಈಗಾಗಲೇ ಅರ್ಜಿ ನೋಂದಾಯಿಸಿದ್ದರೂ ಬಿಲ್ ಬಂದಿದೆ.
ಜುಲೈ ತಿಂಗಳಲ್ಲಿ ಗೃಹಜ್ಯೋತಿ ಫಲಾನುಭವಿ ಒಟ್ಟು
81 ಯೂನಿಟ್ ವಿದ್ಯುತ್ ಬಳಸಿದ್ದಾರೆ. ಅಷ್ಟು ಯುನಿಟಿಗೆ 674.34 ರೂ. ಬಿಲ್ ಬಂದಿದೆ. ಆದರೆ, ಗೃಹಜ್ಯೋತಿ ಯೋಜನೆಯಲ್ಲಿ 172.71 ಕಡಿತಗೊಂಡು 503.00 ಬಿಲ್ ಬಂದಿದೆ.
ಜುಲೈ ತಿಂಗಳ ವಿದ್ಯುತ್ ಬಿಲ್ ಆಗಸ್ಟ್ 3 ರಂದು ನೀಡಿದ್ದಾರೆ.
ಒಟ್ಟು ಉಪಯೋಗಿಸಿದ ಯೂನಿಟ್ ಕೇವಲ 81 ಯೂನಿಟ್. ಆದರೆ ಎಂದಿನಂತೆ ಬಿಲ್ ಬಂದಿರುವುದು ಗ್ರಾಹಕರನ್ನು ಗೊಂದಲಕ್ಕೆ ತಳ್ಳಿದೆ.