ರಡ್ಡೇರಹಟ್ಟಿ :
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಸೋಮವಾರ ಟ್ರಕ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ . ರಡ್ಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಭೀಮಪ್ಪ ಬಾಂವಿ (31) ಸಾವಿಗೀಡಾಗಿದ್ದಾನೆ.
ಟ್ರಕ್ ಚಾಲಕ ಕುಡಿದು ಚಲಾಯಿಸಿದ್ದರಿಂದ ಆತನ ನಿಯಂತ್ರಣ ತಪ್ಪಿ ಓರ್ವನ ಬಲಿಯಾಗಿದೆ.ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.