ಬೆಳಗಾವಿಯ ಕ್ರಿಯಾಶೀಲ ವ್ಯಕ್ತಿಗಳು, ಜನಜೀವಾಳ ಪತ್ರಿಕೆ ಅಂಗಸಂಸ್ಥೆಯಾಗಿರುವ ಜನಸಾಹಿತ್ಯ ಪೀಠದ ಅಧ್ಯಕ್ಷರಾಗಿರುವ ಬಸವರಾಜ ಗಾರ್ಗಿ ಅವರಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಬೆಳಗಾವಿ :
ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ ಈ ಬಾರಿ ಬೆಳಗಾವಿಯ ಪ್ರತಿಷ್ಠಿತ ಜನಸಾಹಿತ್ಯ ಪೀಠದ ಅಧ್ಯಕ್ಷರಿಗೆ ಒಲಿದು ಬಂದಿದೆ.
ನಾಡು-ನುಡಿ, ಸಾಹಿತ್ಯ, ಸಾಮಾಜಿಕ ಪರ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜನ ಸಾಹಿತ್ಯ ಪೀಠದ ಅಧ್ಯಕ್ಷ ಬಸವರಾಜ ಗಾರ್ಗಿ ಅವರಿಗೆ ಈ ಬಾರಿ ಪ್ರಶಸ್ತಿ ಒಲಿದು ಬಂದಿರುವುದು ಬೆಳಗಾವಿಯ ಸಾಹಿತ್ಯ ಪ್ರೇಮಿಗಳಿಗೆ ಗರಿ ಮೂಡಿಸಿದೆ. ಜನ ಸಾಹಿತ್ಯ ಪೀಠದ ಅಧ್ಯಕ್ಷ ಬಸವರಾಜ ಗಾರ್ಗಿ ಅವರಿಗೆ 2019-20 ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಧಾರವಾಡದಲ್ಲಿ ಮಾರ್ಚ್ 27ರಂದು ನಡೆಯಲಿರುವ ಸಮಾರಂಭದಲ್ಲಿ ಬಸವರಾಜ ಗಾರ್ಗಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಬಸವರಾಜ ಗಾರ್ಗಿ ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹಲವಾರು ಕೃತಿಗಳನ್ನು ಇವರು ಹೊರತಂದಿದ್ದಾರೆ. ಇವರ ಸಾಹಿತ್ಯ ಸೇವೆಗೆ ಇದುವರೆಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.
ಬಸವರಾಜ ಗಾರ್ಗಿ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಪ್ರತಿಷ್ಠಿತ ಜನಜೀವಾಳ ಪತ್ರಿಕಾ ಬಳಗ ಹಾಗೂ ಬೆಳಗಾವಿಯ ಸಾಹಿತ್ಯ ವಲಯ ತುಂಬು ಹೃದಯದ ಅಭಿನಂದನೆ ಸಲ್ಲಿಸಿದೆ.