
ಬೆಳಗಾವಿ: ಬೆಳಗಾವಿಗೆ ಬರುತ್ತಿದ್ದ ರೈಲು ಲೊಂಡಾ-ಗುಂಜಿ ನಡುವೆ ಆಗಮಿಸುತ್ತಿದ್ದಾಗ ಪ್ರಾಣಿಯೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಅದೇ ರೈಲಿನಲ್ಲಿ ಬರುತ್ತಿದ್ದ ಖಾನಾಪುರ ಶಾಸಕ ವಿಠಲ ಹಲಗೇಕರ ಅವರು ಅದರ ಗಂಭೀರತೆ ಅರಿತರು. ಇತರ ಪ್ರಯಾಣಿಕರು ಮತ್ತು ರೈಲು ಸಿಬ್ಬಂದಿ ಜೊತೆ ರೈಲಿನ ಕೆಳಗೆ ಇಳಿದು ಪರಿಶೀಲನೆ ನಡೆಸಿದರು.
ಪ್ರಾಣಿ ಡಿಕ್ಕಿ ಹೊಡಿದ ಪರಿಣಾಮ ರೈಲು ಕೆಲಹೊತ್ತು ಸ್ಥಳದಲ್ಲಿ ನಿಲುಗಡೆ ಆಗಬೇಕಾಯಿತು. ಪ್ರಾಣಿಯು ರೈಲ್ವೆಗೆ ಸಿಲುಕಿದ್ದರಿಂದ ಮುಂದಿನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಶಾಸಕ ವಿಠಲ ಹಲಗೇಕರ ಅವರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿ ಸುನೀತಾ ನಿಂಬರಗಿ ಅವರಿಗೆ ಫೋನ್ ಕರೆಯ ಮೂಲಕ ವಿಷಯ ತಿಳಿಸಿದ್ದಾರೆ. ನಂತರ ಅವರ ಸೂಚನೆ ಮೇರೆಗೆ ನಂತರ ಅದನ್ನು ಪಕ್ಕಕ್ಕೆ ಹರಿಸಿದ ನಂತರ ಸಂಚಾರ ಮುಂದುವರಿಯಿತು.


