ಬೆಳಗಾವಿ : ಬೆಳಗಾವಿಯ ಮೂಲ್ಯ ಯಾನೆ ಕುಲಾಲರ ಸಂಘದ 25 ನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟದ ಪ್ರಶಸ್ತಿ ಪ್ರದಾನ ಸಮಾರಂಭ
ಭಾನುವಾರ ಬೆಳಗಾವಿಯ ಪೊಲೀಸ್ ಹೆಡ್ ಕ್ವಾಟರ್ಸ್ ನಲ್ಲಿರುವ ಶ್ರೀ ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ಸಂಭ್ರಮದಿಂದ ನಡೆಯಿತು.
ಮೂಲ್ಯ ಯಾನೆ ಕುಲಾಲರ ಸಂಘದ 25 ನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟದ ಪ್ರಶಸ್ತಿ ಪ್ರದಾನ ಸಮಾರಂಭ ಸಂಘದ
ಅಧ್ಯಕ್ಷ ರೋಹಿತ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆರ್ ಎಸ್ ಎಸ್ ಕಾರ್ಯಕರ್ತ
ಸದಾಶಿವ ರುದ್ರಯ್ಯನವರ, ಸಾಮಾಜಿಕ ಕಾರ್ಯಕರ್ತೆ ಕಸ್ತೂರಿ, ನಿವೃತ್ತ ಸಿಪಿಐ ಶ್ರೀನಿವಾಸ ಹಾಂಡ, ಸಂಘದ ಗೌರವ ಅಧ್ಯಕ್ಷ ಸತೀಶ ಮೂಲ್ಯ ಮತ್ತು ಸಹ ಉಪಾಧ್ಯಕ್ಷ ಮಂಜುನಾಥ ಮೂಲ್ಯ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.