ಬೆಳಗಾವಿ : ನಾದಸುಧಾ ಸುಗಮ ಸಂಗೀತ ಶಾಲೆಯ 16 ನೇ ಸಂಸ್ಥಾಪನಾ ದಿನಾಚರಣೆ ಆ.10 ರಂದು ಸಂಜೆ 5:30ಕ್ಕೆ ನಗರದ ಮಂಗಳವಾರಪೇಟೆಯ ಪಿಂಕ್ ವರಾಂಡ ಪಕ್ಕದ ಟಿಳಕವಾಡಿ ಶಾಲೆ ಆವರಣದಲ್ಲಿ ನಡೆಯಲಿದೆ.
ಸಾಹಿತಿ, ಪತ್ರಕರ್ತ, ಕವಿ ಎಲ್.ಎಸ್. ಶಾಸ್ತ್ರಿ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಉಪಸ್ಥಿತರಿರುವರು ಎಂದು ನಾದಸುಧಾ ಸಂಗೀತ ಶಾಲೆಯ ಸಂಸ್ಥಾಪಕ ಸತ್ಯನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾದಸುಧಾ ಸುಗಮ ಸಂಗೀತ ಶಾಲೆಯ 16 ನೇ ಸಂಸ್ಥಾಪನಾ ದಿನಾಚರಣೆ ರವಿವಾರ
