ಬೆಳಗಾವಿ :
1996 ರ ಲೋಕಸಭಾ ಚುನಾವಣೆ. ಅಂದು ಬೆಳಗಾವಿ ಕ್ಷೇತ್ರದ ಚುನಾವಣೆ ಇಡೀ ದೇಶದ ಗಮನ ಸೆಳೆಯಲು ಕಾರಣವಾಗಿತ್ತು.
ಚುನಾವಣಾ ಆಯೋಗ ಅಂಥ ಸವಾಲನ್ನು ಸ್ವೀಕರಿಸಿತ್ತು. 28 ವರ್ಷಗಳ ಹಿಂದೆ 1996 ರಲ್ಲಿ ಬೆಳಗಾವಿ ಲೋಕಸಭೆ ಚುನಾವಣೆಗೆ ಒಟ್ಟು 456 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದಕ್ಕೆ ಅತಿ ದೊಡ್ಡ ಪ್ರಮಾಣದ ಬ್ಯಾಲೆಟ್ ಪೇಪರ್ ಬಳಸಲಾಗಿತ್ತು. 2-3 ದಿನಗಳ ಕಾಲ ನಿರಂತರವಾಗಿ ಅಧಿಕಾರಿಗಳು ಮತ ಎಣಿಕೆ ಮಾಡಿದ್ದರು. ಇದಕ್ಕಿಂತ ಮುಂಚೆ 1985 ರಲ್ಲಿ 305 ಅಭ್ಯರ್ಥಿಗಳು ಬೆಳಗಾವಿ ವಿಧಾನಸಭೆಗೆ ನಾಮಪತ್ರ
ಸಲ್ಲಿಸಿ ಕಣದಲ್ಲಿ ಉಳಿದಿದ್ದರು.
ಮತದಾನ ಚೀಟಿ ನೀಡುವಂತೆ ಜಾಗೃತಿ ಮೂಡಿಸಲು 1985 ರಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ನಿಲ್ಲಿಸಿದ್ದರೆ,1996ರಲ್ಲಿ ಮತ ವಿಭಜನೆ ಮಾಡಲು 1996 ರಲ್ಲಿ ಎಂಇಎಸ್ನವರು 452 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಎಂಇಎಸ್ನವರು 50ಕ್ಕೂ ಹೆಚ್ಚು ಜನರಿಂದ ನಾಮಪತ್ರ ಸಲ್ಲಿಸಿ ಕಣಕ್ಕಿಳಿಸಿದ್ದರು.
ಬೆಳಗಾವಿ ಲೋಕಸಭೆಗೆ ನಾಮಪತ್ರ ಸಲ್ಲಿಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಿತ್ತು. ಆಗ 64 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದರು. ಒಬ್ಬರು ನಾಮಪತ್ರ ಹಿಂಪಡೆದುಕೊಂಡರೆ ನೋಟಾ ಸೇರಿ 64 ಹೆಸರುಗಳನ್ನು ನಾಲ್ಕು ಮತಯಂತ್ರಗಳಲ್ಲಿ ಅಳವಡಿಸಲು ಸಾಧ್ಯವಿತ್ತು. ಆಗಲೂ ಅಧಿಕಾರಿಗಳಿಗೆ ಸಮಸ್ಯೆ ಎದುರಾಗಿತ್ತು.