ಅದು ಸಹಜ ಸಾವಲ್ಲಾ, ಪಕ್ಕಾ ಪ್ಲ್ಯಾನಿಂಗ್ ಮರ್ಡರ್ ..!
ತಾಯಿ, ಮಗಳು ಸೇರಿ ಕೊಲೆ ಮಾಡಿದ್ದು ಯಾರನ್ನು, ಯಾಕೆ, ಹೇಗೆ ಗೋತ್ತಾ..?
ಪೊಸ್ಟ್ ಮಾರ್ಟಮ್ ಬೆನ್ನಟ್ಟಿ ಪರ್ಫೆಕ್ಟ್ ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ PSI & ಟೀಂ ..!
ಪೊಸ್ಟ್ ಮಾರ್ಟಮ್ ರಿಪೋರ್ಟ್ ಬೆನ್ನಟ್ಟಿ ಪರ್ಫೆಕ್ಟ್ ತನಿಖೆ ನಡೆಸಿ ಪೀರನವಾಡಿ ಕೊಲೆ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಗ್ರಾಮೀಣ PSI & ಟೀಂನ ಕಥೆಯಿದು.
ಬೆಳಗಾವಿ : ಹೆಂಡತಿಯನ್ನು ಬಿಟ್ಟು ಪುಣೆಗೆ ಕೆಲಸಕ್ಕೆಂದು ಹೋಗಿ 3 ವರ್ಷಗಳ ಬಳಿಕ ಮರಳಿ ಬಂದು ಸ್ವಂತ ಪತ್ನಿಯ ಶೀಲ ಶಂಕಿಸಿ ಸಂಶಯ ಪಡುತ್ತಿದ್ದ ವ್ಯಸನಿ ಪತಿಯನ್ನು ಪತ್ನಿ ಹಾಗೂ ಅತ್ತೆ ಸೇರಿಕೊಂಡು ಪಕ್ಕಾ ಪ್ಲ್ಯಾನಿಂಗನಿಂದ ಮರ್ಡರ್ ಮಾಡಿ, ಅದು ಸಹಜ ಸಾವು ಎಂದು ಕಥೆ ಕಟ್ಟಿದ್ದ ತಾಯಿ ಮಗಳನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಹಿಂಡಲಗಾ ಜೈಲಿನ ಕಂಬಿ ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಘಟನೆ ..?
ಬರೋಬ್ಬರಿ ಒಂದು ತಿಂಗಳ ಹಿಂದೆ ಅಂದರೆ ಜುಲೈ 31- 2024 ರಂದು
ನಗರದ ಪೀರನವಾಡಿ ಪ್ರದೇಶದಲ್ಲಿ 48 ವರ್ಷದ ನಿವಾಸಿಯಾದ ವಿನಾಯಕ ಜಾಧವ ಎಂಬುವರು ಅತಿಯಾದ ಸರಾಯಿ ಸೇವನೆಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಅದೆ ಸಮಯದಲ್ಲಿ ಆತನ ಪತ್ನಿ ರೇಣುಕಾ ಜಾಧವ ನನ್ನ ಪತಿಯ ಸಾವಿನಲ್ಲಿ ನಮಗೆ ಸಂಶಯವಿದೆ ಎಂದು ದೂರು ಸಹ ನೀಡಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಕರಣ ತನಿಖಾಧಿಕಾರಿ ಪಿಎಸ್ಐ ಲಕ್ಕಪ್ಪಾ ಜುಡಟ್ಟಿ ತನಿಖೆ ಕೈಕೊಂಡಿದ್ದರು.
ಸತ್ಯಬಿಚ್ಚಿಟ್ಟ ಶವಪರೀಕ್ಷೆ ..!
ಪ್ರಕರಣ ತನಿಖಾಧಿಕಾರಿ ಪಿಎಸ್ಐ ಲಕ್ಕಪ್ಪಾ ಜುಡಟ್ಟಿ ತನಿಖೆ ಕೈಕೊಂಡು ವಿನಾಯಕ ಜಾಧವ ಮರಣೋತ್ತರ ಪರೀಕ್ಷೆ ಪರಿಶೀಲನೆ ನಡಸಿದಾಗ ಅವರಿಗೆ ಇದು ಕೊಲೆ ಎಂದು ಮನವರಿಕೆಯಾಗಿತ್ತು. ಆದರೆ ಆತನ ಪತ್ನಿ ಹಾಗೂ ಆಕೆಯ ತಾಯಿ ಲಕ್ಷ್ಮೀ @ ಶೋಭಾ ಶಿವಾಜಿ ಮಂಗಣ್ಣವರ ಇಬ್ಬರು ಕಿಲಾಡಿಗಳು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಪ್ರಬಲ ಸಾಕ್ಷಿ ಹುಡುಕುವುದು ಸುಲಭವಾಗಿರಲಿಲ್ಲ. ಹೀಗಾಗಿ 15 ದಿನಗಳ ಕಾಲ ಅವರಿಬ್ಬರ ಚಲನವಲನಗಳ ಬಗ್ಗೆ ನಿಗಾ ವಹಿಸಿ ಪೊಸ್ಟ್ ಮಾರ್ಟಮ್ ಆಧಾರದ ಮೇಲೆ ಪರ್ಫೆಕ್ಟ್ ತನಿಖೆ ಕೈಕೊಂಡಾಗ ಇವರಿಬ್ಬರು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಮರ್ಡರ್ ಮಾಡಿದ್ದು ಯಾಕೆ, ಹೇಗೆ..?
ದಶಕಗಳ ಹಿಂದೆ ಮದುವೆಯಾಗಿದ್ದ ರೇಣುಕಾ ಹಾಗೂ ವಿನಾಯಕ ದಂಪತಿಗೆ ಮೂರು ಮಕ್ಕಳಿವೆ. ಕೆಲಸಕ್ಕೆಂದು ಪುಣೆಗೆ ಹೋಗಿದ್ದ ವಿನಾಯಕ ಮೂರು ವರ್ಷಗಳ ಬಳಿಕ ಮರಳಿ ಬಂದ ಮೇಲೆ ಪತ್ನಿ ರೇಣುಕಾಳ ಶೀಲ ಶಂಕಿಸಿ
ಸಂಶಯ ಪಡಲಾರಂಭಿಸಿದ. ಇದರಿಂದ ಬೆಸತ್ತಿದ್ದ ರೇಣುಕಾ ಬಸವನ ಕುಡಚಿಯಲ್ಲಿ ವಾಸವಿದ್ದ ತನ್ನ ತಾಯಿ ಲಕ್ಷ್ಮಿ @ ಶೋಭಾ ಜತೆ ಸೇರಿಕೊಂಡು 2024 ಜುಲೈ 30 ರಂದು ವಿನಾಯಕ ಕಂಠಪೂರ್ತಿ ಕುಡಿದು ಮನೆಗೆ ಬಂದ ಸಮಯದಲ್ಲಿ ಕುತ್ತಿಗೆಗೆ ಹಗ್ಗ, ಸಿರೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಇದು ಸಹಜ ಸಾವು ಎಂದು ಸಾಬೀತು ಮಾಡಲು ಅವನನ್ನು ಮನೆಯ ಹೊರಗೆ ಎಳೆದು ತಂದು ಮಲಗಿಸಿದ್ದಾರೆ. ನಂತರ 31 ಜುಲೈ ಬೆಳಗ್ಗೆ ಪತಿ ಕುಡಿದು ರಾತ್ರಿಯಿಡೀ ಹೊರಗಡೆ ಮಲಗಿದ್ದರಿಂದ ದೇಹ ತಂಪಾಗಿ ಸಾವನಪ್ಪಿರಬಹುದು ಇಲ್ಲಾ ಸಾವಿನಲ್ಲಿ ಸಂಶಯವಿದೆ ಎಂದು ಪೊಲೀಸರ ಮುಂದೆ ನಾಟಕವಾಡಿದ್ದಳು. ಈ ನಾಟಕವನ್ನು ಪ್ರಕರಣದ ತನಿಖಾಧಿಕಾರಿ ಪಿಎಸ್ಐ ಲಕ್ಕಪ್ಪಾ ಜುಡಟ್ಟಿ ಹಾಗೂ ಸಿಬ್ಬಂದಿಗಳು ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ರೇಣುಕಾ ಜಾಧವ ಹಾಗೂ ಅತ್ತೆ ಲಕ್ಷ್ಮೀ @ ಶೋಭಾ ಶಿವಾಜಿ ಮಂಗಣ್ಣವರ ಇಬ್ಬರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಹಿಂಡಲಗಾ ಜೈಲಿಗಟ್ಟಲಾಗಿದೆ.
ಅದು ಸಾವಲ್ಲಾ, ಪಕ್ಕಾ ಪ್ಲ್ಯಾನಿಂಗ್ ಮರ್ಡರ್ ..!
ತಾಯಿ, ಮಗಳು ಸೇರಿ ಕೊಲೆ ಮಾಡಿದ್ದು ಯಾರನ್ನು, ಯಾಕೆ, ಹೇಗೆ ಗೋತ್ತಾ..?
ಪೊಸ್ಟ್ ಮಾರ್ಟಮ್ ಬೆನ್ನಟ್ಟಿ ಪರ್ಫೆಕ್ಟ್ ತನಿಖೆ ನಡೆಸಿ ಪೀರನವಾಡಿ ಕೊಲೆ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಗ್ರಾಮೀಣ PI ಮಂಜುನಾಥ ಹಿರೇಮಠ PSI ಜುಡಟ್ಟಿ & ಟೀಂಗೆ ಕಮೀಷನರ್ ಯಡಾ ಮಾರ್ಟೀನ್ , ಡಿಸಿಪಿ ರೋಹನ್ ಜಗದೀಶ್ ಸೇರಿ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.