ಬೆಳಗಾವಿ :ಬೆಳಗಾವಿ ಮರಾಠಿಗರಿಗೆ ಗಡಿ ವಿವಾದ ಕುರಿತು ಕೆಲ ವರ್ಷಗಳ ಹಿಂದೆ ಬುದ್ದಿ ಹೇಳಿದ್ದ ಮಹಾರಾಷ್ಟ್ರ ನವ ನಿರ್ಮಾಣ ಸೇವೆ ಸಂಸ್ಥಾಪಕ ರಾಜ್ ಠಾಕ್ರೆ ಇಂದು ಬೆಳಗಾವಿಯತ್ತ ಆಗಮಿಸುತ್ತಿದ್ದಾರೆ. ಕೊಲ್ಲಾಪುರ ಪ್ರವಾಸದಲ್ಲಿ ಇರುವ ಅವರನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ ಎಂಇಎಸ್ ನಾಯಕರು ಭೇಟಿ ಮಾಡುವ ಸಾಧ್ಯತೆ ಇದೆ.
ಈ ಹಿಂದೆ ಠಾಕ್ರೆ ಬುದ್ದಿ ಮಾತು ಹೇಳಿದ್ದೇನು ?
ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದು ತೀರ್ಮಾನ ಬರೋವರೆಗೂ ಸುಮ್ಮನೆ ಇರಿ . ಅದರ ಬದಲಿಗೆ ಮಹಾರಾಷ್ಟ್ರ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸುವಂತೆ ಒತ್ತಡ ಹಾಕಿ .ಕಳೆದ 65 ವರ್ಷಗಳಿಂದ ಎಂಇಎಸ್ ನವರು ಬೆಳಗಾವಿಯಲ್ಲಿ ಜನರನ್ನು ಬೆಳಗಾವಿ ಕರ್ನಾಟಕದಿಂದ ಬಿಡುಗಡೆ ಹೊಂದಲಿದೆ ಎಂದು ಮೂರ್ಖರನ್ನಾಗಿ ಮಾಡುತ್ತಿದ್ದಾರೆ . ಇದು ಯಾವತ್ತೂ ಸಾಧ್ಯವಿಲ್ಲದ ಮಾತು . ಇವರಿಗೆ ಈ ವಿಷಯವನ್ನಿಟ್ಟುಕೊಂಡು ಕೇವಲ ಆಟ ಆಡುವುದಷ್ಟೇ ಉದ್ದೇಶ . ಅಲ್ಲಿಯ ಕೆಲವು ಜನರಿಗೂ ಇದೇ ಬೇಕಾಗಿದೆ ಎಂದು ಹೇಳಿದ್ದರು.