ತಹಶಿಲ್ದಾರ ರೇಷ್ಮಾ ತಾಳಿಕೋಟೆ ಪತಿ ತಲಾಠಿ ಆತ್ಮಹತ್ಯೆ ..!
ಆತ್ಮಹತ್ಯೆಗೆ ಕಾರಣವಾಯ್ತಾ ಯಾತ್ರೆ..?
ಬೆಳಗಾವಿ: ಈ ಹಿಂದೆ ಖಾನಾಪೂರ ತಾಲೂಕು ತಹಶಿಲ್ದಾರ ಹಾಗೂ ಹಾಲಿ ಭೂ ಸ್ವಾಧೀನ ಸಹಾಯಕ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರ ಪತಿ ಜಾಫರ್ ಪಿರ್ಜಾದೆ ಇಂದು ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
39 ವರ್ಷದ ಜಾಫರ್ ಪಿರ್ಜಾದೆ ಹಲವು ವರ್ಷಗಳಿಂದ ಬೆಳಗಾವಿಯ ತಹಸೀಲ್ದಾರ್ ಕಚೇರಿಯಲ್ಲಿ ತಲಾಠಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ಸೇವೆಯಲ್ಲಿ ಮುಂಬಡ್ತಿ ಪಡೆದು ಕಂದಾಯ ನಿರೀಕ್ಷಕ ಹುದ್ದೆಗಾಗಿ ಪೈಪೋಟಿ ನಡೆಸಿದ್ದರು.
ಕುಟುಂಬದಲ್ಲಿ ಆದ ತೊಂದರೆಯಿಂದ ಅವರು ಇಂದು ಮಧ್ಯಾಹ್ನ ಅಜಮ್ ನಗರದಲ್ಲಿ ಇರುವ ಅವರ ಸಹೋದರನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಆತ್ಮಹತ್ಯೆ ಸುದ್ದಿ ಹರಡುತ್ತಿದ್ದಂತೆ ಎಪಿಎಂಸಿ ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇವರ ಪತ್ನಿ ರೇಷ್ಮಾ ಬೆಂಗಳೂರಿನಲ್ಲಿದ್ದು ಅವರ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿರುವುದಾಗಿ ತಿಳಿದು ಬಂದಿದೆ.