ಬೆಳಗಾವಿ:
ನೆಹರು ನಗರದ ಕೆಎಲ್ಇ ಸಂಸ್ಥೆಯ ವಿ.ಕೆ.ದಂತ ಮಹಾವಿದ್ಯಾಲಯದಲ್ಲಿ ಮಕ್ಕಳ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗ, ಕಾಹೆರ್, ಕೆಎಲ್ಇ ವಿ.ಕೆ. ದಂತ ವಿಜ್ಞಾನ ಸಂಸ್ಥೆ, ಮಕ್ಕಳ ನರವಿಜ್ಞಾನ ವಿಭಾಗ, ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಮಕ್ಕಳ ಆರೋಗ್ಯ ಶುಶ್ರೂಷೆ ವಿಭಾಗ, ಕಾಹೆರ್ ಕೆಎಲ್ಇ ಸಂಸ್ಥೆ ಜಂಟಿಯಾಗಿ ಅಂತರಾಷ್ಟ್ರೀಯ ವಿಕಲಚೇತನರ ದಿನವನ್ನು ಆಚರಿಸಲಾಯಿತು.
ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿಶೇಷ ಆರೋಗ್ಯ ರಕ್ಷಣೆ ಅಗತ್ಯವಿರುವ ಮಕ್ಕಳಿಗಾಗಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.
ವಿಶೇಷ ಆರೋಗ್ಯ ರಕ್ಷಣೆಯ ಅಗತ್ಯವಿರುವ ಒಟ್ಟು 40-45 ಮಕ್ಕಳನ್ನು ಮೌಖಿಕ ಆರೋಗ್ಯ ಪರೀಕ್ಷಿಸಿ ಅವರ ಪೋಷಕರಿಗೆ ಸರಿಯಾದ ಆಹಾರ ಮತ್ತು ಮೌಖಿಕ ಆರೋಗ್ಯ ನಿರ್ವಹಣೆಯ ಕುರಿತು ತರಬೇತಿಯನ್ನು ನೀಡಲಾಯಿತು.
ಸಮಾರೋಪ ಸಮಾರಂಭವನ್ನು ಕಾಹೆರ್ ಕೆಎಲ್ಇ ವಿಕೆ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ನಲ್ಲಿ ನಡೆಸಲಾಯಿತು. ಕಾಹೆರ್ ಕುಲಸಚಿವ ಡಾ.ಎಂ.ಎಸ್. ಗಣಾಚಾರಿ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ತಂತ್ರಜ್ಞಾನದ ಬಳಕೆಯ ಅಗತ್ಯವನ್ನು ಒತ್ತಿ ಹೇಳಿದರು. ಅಂತಹ ಮಕ್ಕಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಹೆಚ್ಚಿನ ಸಂಶೋಧನೆ ಮತ್ತು ಪೇಟೆಂಟ್ಗಳನ್ನು ಉತ್ಪಾದಿಸಬೇಕು ಎಂದು ಅವರು ಮನವಿ ಮಾಡಿದರು.
ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯೆ ಡಾ. ಪ್ರೀತಿ ದೊಡ್ಡವಾಡ, ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಎನ್.ಎಸ್.ಮಹಾಂತಶೆಟ್ಟಿ, ಕೆಎಎಚ್ಇಆರ್ಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪ್ರಾಚಾರ್ಯ ಡಾ.ವೀರೇಶ ನಾಡಗೌಡ ಗೌರವ ಅತಿಥಿಗಳಾಗಿದ್ದರು.
ಕೆಎಲ್ ಇ ವಿ.ಕೆ. ದಂತ ವಿಜ್ಞಾನ ಸಂಸ್ಥೆಯ ಪ್ರಾಚಾರ್ಯೆ
ಡಾ.ಅಲ್ಕಾ ಕಾಳೆ ಅಧ್ಯಕ್ಷತೆ ವಹಿಸಿದ್ದರು.
ಕೆಎಲ್ ಇ ಸಂಸ್ಥೆಯ ಆಜೀವ ಸದಸ್ಯರಾದ
ಡಾ.ಶಿವಯೋಗಿ ಹೂಗಾರ, ಡಾ. ಮಹೇಶ ಕಮತೆ ವಿಶೇಷ ಉಪನ್ಯಾಸ ನೀಡಿದರು. ಡಾ .ಚಂದ್ರಶೇಖರ ಕಾರ್ಯಕ್ರಮದ ಕುರಿತು ವಿವರಿಸಿದರು.ಡಾ.ವಿದ್ಯಾವತಿ ಪರಿಚಯಿಸಿದರು. ಡಾ.ನೀರಜ್ ವಂದಿಸಿದರು. ಡಾ. ಶೇತಾ ನಿರೂಪಿಸಿದರು.
ವಿ.ಕೆ.ದಂತ ಮಹಾವಿದ್ಯಾಲಯ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.