ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಅಳುವುದು ಸರ್ವೇಸಾಮಾನ್ಯ. ಕೆಲ ರಾಜಕಾರಣಿಗಳು ಆಯಾ ಸಂದರ್ಭವನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಂಡು ಮತದಾರರ ಮನ ಗೆಲ್ಲುವ ತಂತ್ರವಾಗಿ ಮತದಾರರ ಎದುರು ಅಳುವುದು ಆಗಾಗ ಸುದ್ದಿಯಾಗುತ್ತದೆ. ಆದರೆ, ಮಂಗಲಾ ಅಂಗಡಿ ಅವರು ಇದೀಗ ಕಣ್ಣೀರು ಹಾಕುತ್ತಿರುವ ಸನ್ನಿವೇಶ ಬೇರೆಯದ್ದೆ ಆಗಿದೆ. ಏಕೆಂದರೆ ಅವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಪತಿ ಇಲ್ಲದ ಚುನಾವಣೆಯ ಯುದ್ಧಭೂಮಿಯನ್ನು ನೆನೆಸಿಕೊಂಡು ಅವರು ಕಣ್ಣೀರು ಹಾಕಿದ್ದಾರಾ ?
ಬೆಳಗಾವಿ : ಬೆಳಗಾವಿ ಬಿಜೆಪಿ ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಕಣ್ಣೀರು ಸುರಿಸುತ್ತಿರುವ ವಿಡಿಯೋ ಇದೀಗ ಬೆಳಕಿಗೆ ಬಂದಿದೆ.
ಇದೀಗ ಚುನಾವಣಾ ಪ್ರಚಾರ ಮೇರೆ ಮೀರಿದೆ. ಈ ಸಂದರ್ಭದಲ್ಲಿ ಮಂಗಲಾ ಅಂಗಡಿ ಅವರು ಮನಸ್ಸಿನಲ್ಲಿ ಏನನ್ನೋ ನೆನೆದುಕೊಂಡು ಕಣ್ಣೀರು ಸುರಿಸಿದ್ದಾರೆ.
ಈ ಹಿಂದಿನ ಚುನಾವಣೆಗಳನ್ನು ಪತಿ ಸುರೇಶ ಅಂಗಡಿ ಅವರು ಎದುರಿಸುತ್ತಿದ್ದರು. ಆದರೆ, ಅವರು ಇಲ್ಲದ ಚುನಾವಣಾ ರಣಕಣವನ್ನು ನೆನಪಿಸಿಕೊಂಡು ಅವರು ಕಣ್ಣೀರು ಹಾಕಿರಬಹುದು ಎನ್ನುವುದು ಬಹುತೇಕರ ಅನಿಸಿಕೆ.
ಇದುವರೆಗೆ ಸುರೇಶ ಅಂಗಡಿ ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದರೆ, ನಾಲ್ಕು ವರ್ಷಗಳ ಹಿಂದೆ ಕೊರೋನಾಕ್ಕೆ ಬಲಿಯಾದ ಕಾರಣ ನಡೆದ ಉಪಚುನಾವಣೆಯಲ್ಲಿ ಅನಿವಾರ್ಯವಾಗಿ ಮಂಗಲಾ ಅಂಗಡಿ ಸ್ಪರ್ಧಿಸಿದ್ದರು. ಆದರೆ ಸದ್ಯ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಕೈತಪ್ಪಿದೆ. ಅವರ ಬೀಗರಾದ ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಲಭಿಸಿದೆ. ಹೀಗಾಗಿ ಅವರು ಮನಸ್ಸಿನಲ್ಲಿರುವ ತಳಮಳವನ್ನು ಹತ್ತಿಕಿಕೊಳ್ಳಲಾರದೆ ಒಂದೇ ಸಮನೆ ಅಳುತ್ತಿರುವುದು ಈಗ ಚರ್ಚೆಗೆ ಕಾರಣವಾಗಿದೆ.