ಬೆಳಗಾವಿ : ಮಕ್ಕಳ ಉಜ್ವಲ ಭವಿತವ್ಯಕ್ಕೆ ಭದ್ರ ಬುನಾದಿ ಹಾಕುವಲ್ಲಿ ಹಾಗೂ ಅವರಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಿ ಸಂಸ್ಕಾರವುಳ್ಳವರನ್ನಾಗಿ ರೂಪಿಸುವಲ್ಲಿ ಪ್ರಾಥಮಿಕ ಶಾಲೆಗಳ ಪಾತ್ರ ಹಿರಿದಾದುದು.
ಬೆಳಗಾವಿ ತಾಲೂಕು ಹಿಂಡಲಗಾ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿನೈದು ವರುಷಗಳ ಹಿಂದೆ ಈ ಶಾಲೆಯ ವಿದ್ಯಾರ್ಥಿಗಳು ಇಂದು ವಿವಿಧ. ಕ್ಷೇತ್ರಗಳಲ್ಲಿ ಸಾಧಕರಾಗಿ ಬದುಕನ್ನು ಬಂಧುರಗೊಳಿಸಿದ್ದಾರೆ. ಇದು ಶಾಲೆ ಹಾಗೂ ಕಲಿಸಿದ ಗುರುಗಳಿಗೂ ತುಂಬು ಅಭಿಮಾನವೆಂದು ಗುರುಗಳಾದ ಡಿ.ಜಿ.ಬೇವಿನಕೊಪ್ಪಮಠ ಹೇಳಿದರು.
ಬೋಧಿಸಿದ ಗುರುಗಳನ್ನು ನೆನಪಿಸಿ ಸನ್ಮಾನಿಸುತ್ತಿರುವ ಇದು ವಿಶಿಷ್ಟತೆಯಿಂದ ಕೂಡಿದ ಭಾವನಾತ್ಮಕತೆಯಿಂದ ಕೂಡಿದ ಸಮಾರಂಭ ಎಂದು ಸನ್ಮಾನ ಸ್ವೀಕರಿಸಿ ಗುರುಗಳಾದ ಎಸ್. ಜಿ.ಚವಲಗಿ, ಆರ್.ಬಿ.ಗೋಶ್ಯಾನಟ್ಟಿ, ಶ್ರೀಮತಿ ಡಿ.ಬಿ ಪಾಟೀಲ, ಜಿ.ಬಿ.ನಾಯ್ಕರ (ಕುಸುಗಲ್ಲ) ಹಾಗೂ ಜಿ.ಎ.ಶಭಾಷ್ ಖಾನ್ ಮೊದಲಾದವರು ತಮ್ಮ ಸಂತಸ ವ್ಯಕ್ತ ಪಡಿಸಿದರು.
ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯಲ್ಲಿರುವ ಐಶ್ವರ್ಯ ಲಾಖೆ, ಸುನಿಲ್ ಹಾಗೂ ವಿವಿಧ ಇಲಾಖೆಯಲ್ಲಿ ಸೇವೆಯಲ್ಲಿರುವ ಹಾಗೂ ಸ್ವಂತ ಉದ್ಯೋಗಗಳಲ್ಲಿ ಬದುಕು ಕಟ್ಟಿಕೊಂಡ ಇನ್ನಿತರ ಹಳೆಯ ವಿದ್ಯಾರ್ಥಿಗಳು ತಮ್ಮ ಮನದ ಮಾತುಗಳನ್ನು ಬಿಚ್ಚಿಟ್ಟರು.
ಪ್ರಧಾನ ಗುರುಗಳಾದ ಎನ್. ಜಿ.ಗಡ್ಲಿಂಗನವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿಂದು ಕುಟ್ಟಿ, ಕಾರ್ಯಕ್ರಮದ ಸಂಯೋಜನೆಯನ್ನು ಮಾಡಿದ್ದರು..
ಎಸ್. ಡಿ.ಎಂ.ಸಿ.ಅಧ್ಯಕ್ಷರು, ಸದಸ್ಯರು , ಗಣ್ಯರಾದ ಎಸ್. ಭೀ.ಹೆಬ್ಬಾಳ, ಶಿವಪ್ರಸಾದ ಹಿರೇಮಠ, ಅಖ್ತರುಲಮಾನ ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು. ಗುಲಾಬಿ ಸ್ವಾಗತಿಸಿದರು. ಸುನೀಲ್ ನಿರೂಪಿಸಿದರು. ಐಶ್ವರ್ಯ ವಂದಿಸಿದರು.


