ಬೆಳಗಾವಿ :
ನಗರದ ಈಫಾ ಹೋಟೆಲ್ ನಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ನೀತಿ ಆಯೋಗ ಮತ್ತು ಶೆಲ್ ಇಂಡಿಯಾ ಸಹಯೋಗದಲ್ಲಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಡಿಡಿಪಿಐ ಚಿಕ್ಕೋಡಿ ಎಸ್.ಎಲ್. ಹಂಚಾಟೆ, ಹುಕ್ಕೇರಿ ಬಿಇಒ ಪ್ರತಿಭಾ ಪಾಟೀಲ, ಬೆಳಗಾವಿ ಬಿಇಒ ಎಲ್ಎಸ್ ಹಿರೇಮಠ ಹಾಗೂ ಇನ್ನಿತರ ಅತಿಥಿಗಳ ಉಪಸ್ಥಿತರಿದ್ದರು. ಶೆಲ್ ಇಂಡಿಯಾದ ಸಾಮಾಜಿಕ ಕಾರ್ಯನಿರ್ವಹಣೆ ಸಲಹೆಗಾರ ದೀಪಕ್ ಜೋಷಿ, ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಮೊಹಮ್ಮದ್ ಕಮರೋದ್ದೀನ್ ಹಾಗೂ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಚಂದ್ರಲೇಖಾ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ, ಮುಂದಿನ ಪೀಳಿಗೆಯ ನಾಯಕರನ್ನು ಪ್ರೇರೇಪಿಸಲು ಶಲ್, ನೆಕ್ಸ್ಟ್ ಕ್ಲೋರಸ್ ಶಿಕ್ಷಕರನ್ನು ಸಜ್ಜುಗೊಳಿಸುತ್ತಿದೆ, ಯುವ ಮನಸ್ಸುಗಳನ್ನು ಪೋಷಿಸುವ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯುವ ಪ್ರಯಾಣ ಮತ್ತಷ್ಟು ಪ್ರೇರಣೆಯನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟರು.
25 ಎಟಿಎಲ್ ಶಾಲೆಗಳಿಂದ ಒಟ್ಟು 36 ಶಿಕ್ಷಕರು ಹಾಜರಾಗಿದ್ದರು.
ಈ ಕಾರ್ಯಗಾರದ ಮುಂದುವರಿದ ಭಾಗವಾಗಿ ರಿಫ್ರೆಶರ್-1 ತರಬೇತಿಯನ್ನು 9ನೇ ಜನವರಿ 2024 ರಂದು ಈಫಾ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. 16 ಎಟಿಎಲ್ ಶಾಲೆಗಳಿಂದ ಒಟ್ಟು 19 ಶಿಕ್ಷಕರು ತರಬೇತಿಯ ಲಾಭವನ್ನು ಪಡೆದರು.