ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಎನ್ ಪಿ ಎಸ್ ಸಮಿತಿಯ ಅಧ್ಯಕ್ಷ ಅಂಜಂ ಪರ್ವೇಜ್ ಅವರನ್ನು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ನೇತೃತ್ವದ ನಿಯೋಗ ಭೇಟಿ ಮಾಡಿ ಎನ್ ಪಿಎಸ್ ರದ್ದತಿ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿತು.
ಎನ್ ಪಿ ಎಸ್ ಸಮಿತಿಯು ಅಂತಿಮ ಸಭೆಯನ್ನು ನಡೆಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಸರ್ಕಾರಕ್ಕೆ ಸಲ್ಲಿಸುವ ವರದಿಯಲಿ ಎನ್ ಪಿಎಸ್ ನೌಕರರಿಗೆ ಪೂರಕವಾದ ಅಂಶಗಳ ಅಧ್ಯಯನ ಮಾಡಿ ತಯಾರಿಸಿದ ವರದಿಯನ್ನು ಬಜೆಟ್ ಮಂಡನೆ ಪೂರ್ವದಲ್ಲಿಯೇ ಸಲ್ಲಿಸುವ ಭರವಸೆಯನ್ನು ಅಂಜಂ ಪರ್ವೇಜ್ ನೀಡಿದ್ದಾರೆ.
ವರದಿ ಸರ್ಕಾರಕ್ಕೆ ನೀಡಿದ ಬಳಿಕ ಸಂಘವು ಸರ್ಕಾರದ ಮೇಲೆ ಒತ್ತಡ ತಂದು ಒಪಿಎಸ್ ಜಾರಿಗೆ ಕ್ರಮ ವಹಿಸಲಿದೆ.