ನವದೆಹಲಿ: ಅಜಿತ ಅಗರ್ಕರ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಮಂಗಳವಾರ ಮುಂದಿನ ತಿಂಗಳು ನಡೆಯಲಿರುವ ಟಿ 20 ಏಷ್ಯಾ ಕಪ್ಗಾಗಿ ಭಾರತದ 15 ಜನರ ತಂಡವನ್ನು ಪ್ರಕಟಿಸಿದೆ. ಸೂರ್ಯಕುಮಾರ ಯಾದವ್ ನಾಯಕರಾಗಿದ್ದು, ಶುಭಮನ್ ಗಿಲ್ ಉಪನಾಯಕರಾಗಿದ್ದಾರೆ.
ಭಾರತದ ತಂಡವು ಯುಎಇ, ಪಾಕಿಸ್ತಾನ ಮತ್ತು ಒಮಾನ್ ಜೊತೆಗೆ ಎ ಗುಂಪಿನಲ್ಲಿದೆ. ಯಶಸ್ವಿ ಜೈಸ್ವಾಲ್ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿಲ್ಲ ಆದರೆ ಐದು ಜನರ ಸ್ಟ್ಯಾಂಡ್ಬೈ ಪಟ್ಟಿಯಲ್ಲಿದ್ದಾರೆ, ಅವರಲ್ಲಿ ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ, ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಕೂಡ ಇದ್ದಾರೆ.
ಹಾಲಿ ಚಾಂಪಿಯನ್ ಭಾರತ, ಸೆಪ್ಟೆಂಬರ್ 10 ರಂದು ದುಬೈನಲ್ಲಿ ಯುಎಇ ತಂಡದ ವಿರುದ್ಧ ಆಡುವ ಮೂಲಕ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ, ಅವರು ಮೂರು ದಿನಗಳ ನಂತರ ಅದೇ ಸ್ಥಳದಲ್ಲಿ ಪಾಕಿಸ್ತಾನದ ವಿರುದ್ಧ ಆಡಲಿದ್ದಾರೆ. ಗುಂಪು ಹಂತದಿಂದ ತಂಡಗಳು ಸೂಪರ್ ಫೋರ್ಗೆ ಆಯ್ಕೆಯಾಗುತ್ತವೆ. ನಂತರ ಸೆಪ್ಟೆಂಬರ್ 28 ರಂದು ಫೈನಲ್ ನಡೆಯಲಿದೆ.
ಟೂರ್ನಿಯು ಟಿ 20 ಸ್ವರೂಪದಲ್ಲಿ ನಡೆಯಲಿದ್ದು, ಮೂಲತಃ ಭಾರತದಲ್ಲಿ ನಡೆಯಬೇಕಿತ್ತು. ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ, ಅದನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.
ಭಾರತದ ಪೂರ್ಣ ತಂಡ: ಸೂರ್ಯಕುಮಾರ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ ಶರ್ಮಾ, ತಿಲಕ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ ಪಟೇಲ್, ಜಿತೇಶ ಶರ್ಮಾ, ಜಸ್ಪ್ರೀತ್ ಬುಮ್ರಾ, ವರುಣ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ.
ಸ್ಟ್ಯಾಂಡ್ಬೈಸ್: ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ, ರಿಯಾನ್ ಪರಾಗ್, ಧ್ರುವ ಜುರೆಲ್, ಯಶಸ್ವಿ ಜೈಸ್ವಾಲ್
ಟಿ 20 ಏಷ್ಯಾ ಕಪ್ 2025 : ಭಾರತದ ತಂಡ ಪ್ರಕಟ
