ಸ್ವಿಟ್ಜರ್ಲ್ಯಾಂಡ್ ಸರ್ಕಾರವು ಕೂಡ ಸಾರ್ವಜನಿಕ ಸ್ಥಳದಲ್ಲಿ ಕಣ್ಣು, ಮುಖ, ಮೂಗು ಬಾಯಿ ಮುಚ್ಚುವ ಮುಖಗವಸು (facial coverings in public) ಧರಿಸುವುದಕ್ಕೆ ನಿಷೇಧ ಹೇರಿದೆ. ಇದು 2025 ಜನವರಿ 1ರಿಂದ ಬುರ್ಖಾ ನಿಷೇಧ ಕಾನೂನು ಜಾರಿಗೆ ಬರಲಿದೆ.
ಸ್ವಿಟ್ಜರ್ಲ್ಯಾಂಡ್ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಿದೆ. ಹಾಗಾಗಿ ಸ್ವಿಟ್ಜರ್ಲ್ಯಾಂಡ್ನ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣು, ಮೂಗು, ಬಾಯಿ ಮುಖವನ್ನು ಮುಚ್ಚುವ ಬುರ್ಖಾ ಧರಿಸಿ ಓಡಾಡುವಂತಿಲ್ಲ. ಮುಂದಿನ ವರ್ಷದಲ್ಲಿ ಈ ಕಾನೂನು ಕ್ರಮ ಜಾರಿಯಾಗಲಿದೆ. ಈ ನಿಮಯವನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
2021ರಲ್ಲಿ ಬುರ್ಖಾ ಪದ್ಧತಿ ನಿಷೇಧ ಮಾಡುವ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಮಾಡಿದಾಗ ಕೂಡ ಬಹುಸಂಖ್ಯೆಯ ಜನರು ಇದಕ್ಕೆ ಸಮ್ಮತಿ ನೀಡಿದ್ದರು. ಅಲ್ಲದೆ, ಈ ಮಸೂದೆಗೆ ಸ್ವಿಸ್ ಸಂಸತ್ ಮೇಲ್ಮನೆಯಲ್ಲಿ ಕೂಡ ಅಂಗೀಕಾರ ದೊರಕಿದೆ. ಅಲ್ಲದೆ ಹಾಗಾಗಿ ಸ್ವಿಟ್ಜರ್ಲ್ಯಾಂಡ್ ಸರ್ಕಾರ ಬುರ್ಖಾ ನಿಷೇಧಕ್ಕೆ ಮುಂದಾಗಿದೆ. ಜನವರಿ 1, 2025 ರಿಂದ ಈ ಕಠಿಣ ಕಾನೂನು ಜಾರಿಗೆ ಬರಲಿದ್ದು, ಈ ನಿಯಮವನ್ನು ಉಲ್ಲಂಘಿಸಿದವರಿಗೆ 1,000 ಸ್ವಿಸ್ ಫ್ರಾಂಕ್ ಅಂದರೆ ಅಂದಾಜು 96,280 ರೂ. ದಂಡವನ್ನು ವಿಧಿಸಲಾಗುವುದು ಎಂಬ ಕಾನೂನನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರ ಜಾರಿಗೊಳಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಪ್ರಕಾರ, ಕೆಲವು ಸ್ಥಳಗಳು ಮತ್ತು ಸನ್ನಿವೇಶಗಳಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಅಂದರೆ ವಿಮಾನದಲ್ಲಿ ಪ್ರಯಾಣಿಸುವಾಗ, ರಾಜತಾಂತ್ರಿಕ ಸ್ಥಳಗಳು, ಪವಿತ್ರ ಸ್ಥಳಗಳು, ಪೂಜಾ ಆವರಣಗಳಲ್ಲಿ ಬುರ್ಖಾಗಳನ್ನು ಧರಿಸಬಹುದು. ಅಲ್ಲದೇ ಆರೋಗ್ಯ ಸಮಸ್ಯೆಗಳು ಹಾಗೂ ವಿಪರೀತ ಚಳಿಯ ಸಂದರ್ಭದಲ್ಲಿ ಮುಖ ಮುಚ್ಚುವಂತೆ ಬುರ್ಖಾಗಳನ್ನು ಧರಿಸಬಹುದು. ಜಾಹೀರಾತು ಮನರಂಜನಾ ಉದ್ದೇಶಗಳಿಗಾಗಿ ಬುರ್ಖಾ ಮತ್ತು ಮುಖ ಗವಸು ಧರಿಸಬಹುದು. ಇದಕ್ಕೆ ಸಂಬಂಧಿಸಿದ ಪ್ರಾಧಿಕಾರವು ಅನುಮತಿ ನೀಡಿದರೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ವೈಯಕ್ತಿಕ ರಕ್ಷಣೆಗಾಗಿ ಬುರ್ಖಾ ಅಥವಾ ಮುಖ ಗವಸು ಧರಿಸಬಹುದು ಎಂದು ಸ್ವಿಸ್ ಸರಕಾರ ಹೇಳಿದೆ.