ಬೆಳಗಾವಿ:
ಈಜು ಇತರ ಕ್ರೀಡೆಗಳಿಗಿಂತ ವಿಭಿನ್ನವಾಗಿದ್ದು, ಇದು ನಮ್ಮಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಗೋವಾವೆಸ್ ನಲ್ಲಿರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಶ್ರೀ ಎಲ್.ಆರ್. ಪಾಟೀಲ ಅವರ ಸ್ಮರಣಾರ್ಥವಾಗಿ ಮರಾಠಾ ಯುವಕ ಸಂಘದಿಂದ ಹಮ್ಮಿಕೊಳ್ಳಲಾದ 18 ನೇ ಅಂತರರಾಜ್ಯ ಈಜು ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 18 ವರ್ಷಗಳಿಂದ ಈಜು ಸ್ಪರ್ಧೆ ಆಯೋಜಿಸುತ್ತಿರುವ ಮರಾಠಾ ಯುವಕ ಸಂಘದ ಕಾರ್ಯ ಶ್ಲಾಘನೀಯವಾಗಿದೆ. ಜಿಲ್ಲೆಯ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸಂಬಂಧಿಸಿದ ಅವಶ್ಯಕತೆಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಈಗಿರುವ ಈಜುಕೋಳವನ್ನು ದೊಡ್ಡದಾಗಿ ನಿರ್ಮಿಸಲು 50 ಮೀಟರ್ ಜಾಗವನ್ನು ನೀಡುವ ಭರವಸೆ ನೀಡಿದರು.
ಮೀನಿನಂತೆ ಈಜಾಡಿದ ಸ್ಪರ್ಧಾಳಗಳು: 18 ನೇ ಅಂತರರಾಜ್ಯ ಈಜು ಸ್ಪರ್ಧೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಒಟ್ಟು 350 ಈಜು ಸ್ಪರ್ಧಾಗಳು ಭಾಗಿಯಾಗಿದ್ದರು. ಈಜುಗೋಳದಲ್ಲಿ ಸ್ಪರ್ಧಾಳುಗಳು ಈಜಾಡಿದ ದೃಶ್ಯ ನೋಡುಗರಿಗೆ ನೀರಿನಲ್ಲಿ ಮೀನಿನಂತೆ ಈಜಾಡಿದಂತೆ ಬಾಸವಾಯಿತು.
ಓಡಿಸ್ಸಾದಲ್ಲಿ ನಡೆದ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಬೆಳಗಾವಿಯಿಂದ ಪ್ರತಿನಿಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಅಬಾಕ್ ಲದ್ದವ್ , ದೀಶಾ ಹೊಂಡಿ ಹಾಗೂ ಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಋತುಜಾ ಪವಾರ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ, ಸನ್ಮಾನಿಸಲಾಯಿತು.
ಮರಾಠಾ ಯುವ ಸಂಘದ ಅಧ್ಯಕ್ಷ ಬಾಳಾಸಾಹೇಬ್ ಕಾಕತಕರ್ , ವಿಜಯ ಮಾಂಗಳೇಕರ್ , ಶಿವಾಜಿರಾವ್ ಅತ್ತವಾಳಕರ್ , ಮರಾಠಾ ಬ್ಯಾಂಕ್ ಚೇರ್ಮನ್ ದಿಗಂಬರ್ ಪವಾರ, ಮಹೋನ್ ಸಪ್ಪರೇ, ಶೀತಲ್ ಹುಲಬತ್ತೆ, ಅಜಿತ ಸಿದ್ದಣ್ಣವರ, ವಿಶ್ವಾಸ ಪವಾರ್ , ಚಂದ್ರಕಾಂತ ಗುಂತಕಲ್ , ಅರಗುನಾಥ ಬಾನಗೇ, ಶ್ರೀಕಾಂತ ದೇಸಾಯಿ, ಅಜೀತ ಜಾಧವ, ಅಶೋಕ ಭಾತಕಂಡೆ, ಸಂಜಯ ಶಿಂಧೆ ಹಾಗೂ ಇತರರು ಉಪಸ್ಥಿತರಿದ್ದರು.