ಗೋಕಾಕ : ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಮಖಂಡಿಯ ಹೊಸ ಬಬಲಾದಿ ಮಠದ ಸದಾಶಿವ ಸ್ವಾಮೀಜಿ ಅವರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಸ್ವಾಮೀಜಿ ಮತ್ತು ಅವರ ಕುಟುಂಬದವರಿಗೆ ಹಣ ವರ್ಗಾವಣೆ ಆಗಿದೆ. ಆ ಹಣದಲ್ಲೇ ಸ್ವಾಮೀಜಿ ನಿವೇಶನ ಖರೀದಿಸಿದ್ದಾರೆ ಎಂಬ ಆರೋಪವಿದೆ. ಮಠದ ಜಾತ್ರೆ ಮತ್ತು ಮಹಾಪ್ರಸಾದ ವ್ಯವಸ್ಥೆಗೂ ಆರೋಪಿಗಳು ಆರ್ಥಿಕ ನೆರವು ಒದಗಿಸಿದ್ದಾರೆಂದು ಗೊತ್ತಾಗಿದೆ. ಅದಕ್ಕೆ ಸದಾಶಿವ ಸ್ವಾಮೀಜಿ ವಶಕ್ಕೆ ಪಡೆದು ಗೋಕಾಕ ಶಹರ ಠಾಣೆಯಲ್ಲಿ ಸಿಐಡಿ ಪೊಲೀಸರಿಂದ ವಿಚಾರಣೆ ನಡೆದಿದೆ.
ಈ ಬ್ಯಾಂಕ್ನಲ್ಲಿ ರೂ. 74 ಕೋಟಿಗೂ ಅಧಿಕ ಮೊತ್ತದ ವಂಚನೆಯಾಗಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ಅಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದಿತ್ತು.