ಸಂಕೇಶ್ವರ :
ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಸ್ವಚ್ಛ ಸಂಕೇಶ್ವರ ಎಂಬ ಅಭಿಯಾನವನ್ನು ನಿಡಸೋಸಿಯ ಶ್ರೀ ದುರದುಂಡೇಶ್ವರ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಬರುವ
ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ದಿನದಂದು ಚಾಲನೆ ನೀಡಲಾಗುವುದು
ಎಂದು ಡಾ.ರಮೇಶ ದೊಡ್ಡಭಂಗಿ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಸ್ವಚ್ಛ ಸಂಕೇಶ್ವರ” ಕಾರ್ಯಕ್ರಮ ಉದ್ಘಾಟಕರು ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿವರು ಹಾಗೂ ಮುಖ್ಯ ಅತಿಥಿಗಳಾಗಿ ಪೂಣಾದ ಚಂದ್ರಕಾಂತ ಕುಲಕರ್ಣಿ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ಮತ್ತು ಪುರಸಭೆ ಸದಸ್ಯರುಗಳು ಹಾಗೂ ಸುಮಾರು 300ಕ್ಕೂ ಅಧಿಕ ಜನಸಾಮ್ಯಾರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಡಾ. ಗುರುಪಾದ ಮರಿಗುದ್ದಿ,
ಪುರಸಭೆ ಸದಸ್ಯರಾದ ಸುನೀಲ ಪರ್ವತರಾವ್, ಶಿವಾನಂದ ಮುಡಶಿ, ಡಾ.ಜಯಪ್ರಕಾಶ ಕರಜಗಿ, ನ್ಯಾಯವಾದಿ ಸಂತೋಷ ನೇಸರಿ, ರಾಜೇಂದ್ರ ಬೋರಗಾವಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರೋಹನ ನೇಸರಿ,ಆನಂದ ಸಂಸುದ್ದಿ, ಶ್ರೀಧರ ಪಾಟೀಲ ಸೇರಿದಂತೆ ಇತರರು ಇದ್ದರು.