ಬೆಳಗಾವಿ :
ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಇಲ್ಲಿಯ ಸುವರ್ಣ ಸೌಧ ಸಕಲ ಸಜ್ಜಾಗಿದೆ.
ಬೆಂಗಳೂರಿನ ವಿಧಾನಸೌಧದ ಎಲ್ಲಾ ಕಚೇರಿಗಳು ಇದೀಗ ಸುವರ್ಣ ವಿಧಾನಸೌಧದಲ್ಲಿ ತಾತ್ಕಾಲಿಕವಾಗಿ ನೆಲೆಯಾಗಿವೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಬೆಳಗಾವಿಯಲ್ಲಿ ಬೀಡು ಬಿಟ್ಟಿದೆ. ಸಚಿವರು, ಶಾಸಕರು ಇಷ್ಟರಲ್ಲೇ ಬೆಳಗಾವಿಗೆ ಬರಲಿದ್ದಾರೆ. ಕೆಲ ಸಚಿವರು ರವಿವಾರವೇ ಬೆಳಗಾವಿಗೆ ಬರಲಿದ್ದಾರೆ. ಇನ್ನು ಕೆಲ ಸಚಿವರು, ಶಾಸಕರು ಸೋಮವಾರ ಸದನವನ್ನು ಸೇರಿಕೊಳ್ಳಲಿದ್ದಾರೆ. ವಿಧಾನ ಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣಸೌಧ ಇದೀಗ ಕಳೆಗಟ್ಟಿದೆ.