ಕಾಠ್ಮಂಡು: ನೇಪಾಲದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಸರಕಾರವನ್ನು ಮುನ್ನಡೆಸಲಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಗೆ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಈ ವಾರದ ಆರಂಭದಲ್ಲಿ ಪ್ರಧಾನಿ ಕೆ.ಪಿ. ಶರ್ಮ ಓಲಿ ಅವರ ಹಠಾತ್ ರಾಜೀನಾಮೆಯ ನಂತರದ ರಾಜಕೀಯ ಅನಿಶ್ಚಿತತೆಯನ್ನು ಕೊನೆಗೊಳಿಸಿದಂತಾಗಿದೆ.
ನೇಪಾಲದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದ ನಾಯಕಿ 73 ವರ್ಷದ ಸುಶೀಲಾ ಕರ್ಕಿ, ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗುವ ಮೂಲಕ ಇತಿಹಾಸ ಬರೆದಿದ್ದಾರೆ.
ನೇಪಾಲದ ಉನ್ನತ ಮಿಲಿಟರಿ ಮುಖ್ಯಸ್ಥರಾದ ರಣಚಂದ್ರ ಪೌಡೆಲ್ ಮತ್ತು ಜನರಲ್ ಝಡ್ ಪ್ರತಿನಿಧಿಗಳ ನಡುವಿನ ಸಭೆಯ ನಂತರ ಮಧ್ಯಂತರ ಸರಕಾರವನ್ನು ಮುನ್ನಡೆಸಲು ಕರ್ಕಿ ಅವರನ್ನು ಆಯ್ಕೆ ಮಾಡಲಾಗಿದೆ.
ರವಿವಾರದಿಂದ ನೇಪಾಲದಲ್ಲಿ ಡೆದ ಬೃಹತ್ ಪ್ರತಿಭಟನೆಗಳ ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ತತ್ ಕ್ಷಣದ ಭಾರೀ ಸವಾಲನ್ನು ಸುಶೀಲಾ ಕರ್ಕಿ ಅವರು ಎದುರಿಸುತ್ತಿದ್ದಾರೆ.