ಅಯೋಧ್ಯೆ:
ಪ್ರತಿವರ್ಷ ರಾಮನವಮಿಯ ದಿನ ರಾಮಲಲ್ಲಾನ ಮೂರ್ತಿಯ ಮೇಲೆ ಸೂರ್ಯನ ಬೆಳಕು ಬೀಳುವಂತೆ ಮಾಡುವ ‘ಸೂರ್ಯ ತಿಲಕ’ ಯಂತ್ರವನ್ನು ಬೆಂಗಳೂರಿನ ಕಂಪನಿಯೊಂದು ಕೊಡುಗೆಯಾಗಿ ನೀಡಿದೆ. ಇದು ಪೆರಿಸ್ಕೋಪ್ನಂತೆ ಕಾರ್ಯ ನಿರ್ವಹಿಸಲಿದ್ದು, ಸೂರ್ಯನ ಬೆಳಕನ್ನು ರಾಮ ಮೂರ್ತಿಯ ಮೇಲೆ ಪ್ರತಿಬಿಂಬಿಸಲಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಫೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಹಯೋಗ ದೊಂದಿಗೆ ಬೆಂಗಳೂರಿನ ಜಿಗಣಿಯಲ್ಲಿರುವ ಆಪ್ಟಿಕ್ಸ್ ಅಂಡ್ ಅಲೈಡ್ ಎಂಜಿನಿಯರಿಂಗ್ ಪ್ರೈ.ಲಿ. ಈ ಯಂತ್ರವನ್ನು ತಯಾರಿಸಿದೆ. ಮಂದಿರದಲ್ಲಿ ಕಬ್ಬಿಣದ ಬಳಕೆ ಮಾಡಿಲ್ಲದ ಕಾರಣ ಇದನ್ನು ಟೈಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ತಯಾರು ಮಾಡಲಾಗಿದೆ.