ಹೊಸದಿಲ್ಲಿ: ಸಾರ್ವಜನಿಕರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಚಾರಿತ್ರಿಕವಾದ ತೀರ್ಪುಗಳ ಒದಗಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನೂತನ ವೆಬ್ ಪೇಜ್ ಆರಂಭಿಸಿದೆ.
‘ಲ್ಯಾಂಡ್ ಮಾರ್ಕ್ ಜಡ್ಜ್ಮೆಂಟ್ ಸಮ್ಬರೀಸ್’ (Landmark Judgment Summaries) ಎಂಬ ವೆಬ್ ಪುಟದಲ್ಲಿ ಮಹತ್ವದ ತೀರ್ಪುಗಳಿದ್ದು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಪ್ರಕಟಣೆ ತಿಳಿಸಿದೆ.ಸುಪ್ರೀಂ ಕೋರ್ಟ್ನ ಸಂಶೋಧನೆ ಮತ್ತು ಯೋಜನಾ ಕೇಂದ್ರವು ತೀರ್ಪುಗಳ ಸಾರಾಂಶವನ್ನು ಸಿದ್ಧಪಡಿಸುತ್ತದೆ.
ದೇಶದ ಪ್ರಜೆಗಳಿಗೆ ನ್ಯಾಯಾಂಗ ಸಾಗಿ ಬಂದ ದಾರಿಯಲ್ಲಿನ ಮೈಲುಗಲ್ಲು ತೀರ್ಪುಗಳ ಮಾಹಿತಿ ಇರಬೇಕು. ಕಾನೂನು ಕುರಿತು ಜಾಗೃತಿ ಮೂಡಿಸುವುದು ಹಾಗೂ ಕಾನೂನು ಅನುಷ್ಠಾನ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು ಎಂಬ ಸುಪ್ರೀಂ ಕೋರ್ಟ್ ಆಶಯದಂತೆ ವೆಬ್ ಪುಟವನ್ನು ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.