ಬೆಳಗಾವಿ : ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ 133 ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ನವೆಂಬರ್ 2 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1:45 ರವರೆಗೆ ಶ್ರೇಷ್ಠ ಮಕ್ಕಳ ನಿರ್ಮಾಣ ವಿಷಯವಾಗಿ ಪೋಷಕರ ಕಾರ್ಯಾಗಾರ ಏರ್ಪಡಿಸಲಾಗಿದೆ.
ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ನವದುರ್ಗಾನಂದ ಅವರು ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೇ ಮಹತ್ವದ್ದು, ಸ್ವಾಮಿ ಮೋಕ್ಷಾತ್ಮಾನಂದ ಅವರು ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಆಹಾರ ಮತ್ತು ಧ್ಯಾನದ ಪ್ರಾಮುಖ್ಯ ಮತ್ತು ಬೆಳಗಾವಿಯ ಕೈವಲ್ಯಂ ಫೌಂಡೇಶನ್ ಸಂಸ್ಥಾಪಕ ಮತ್ತು ನರಶಾಸ್ತ್ರ ಚಿಕಿತ್ಸಾ ತಜ್ಞ ಡಾ. ಪ್ರಶಾಂತ ಕಟಕೊಳ ಅವರು ಮಕ್ಕಳ ಪೋಷಣೆ- ಅನಾವರಣ ವಿಷಯವಾಗಿ ಮಾತನಾಡುವವರು. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಪೋಷಕರು ಆಶ್ರಮಕ್ಕೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿ ಪ್ರತಿನಿಧಿ ಚೀಟಿಯನ್ನು ಅಕ್ಟೋಬರ್ 31ರ ಒಳಗೆ ಪಡೆಯುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮಹಾದೇವ ದೇವನಾಥ ಮೊಬೈಲ್ ಸಂಖ್ಯೆ : 9448110685 ಮತ್ತು ಮಲ್ಲಿಕಾರ್ಜುನ ಗುನ್ನಾಗೋಳ ಮೊಬೈಲ್ ಸಂಖ್ಯೆ: 8904404475 ಇವರನ್ನು ಸಂಪರ್ಕಿಸುವಂತೆ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದ ಅವರು ಕೋರಿದ್ದಾರೆ.


