ಖಾಸಬಾಗ ಹಿರಿಯರು ಸುಮಿತ್ರಾ ಕಲಗೌಡ ಪಾಟೀಲ ನಿಧನ..!
AEQUS ಕಂಪನಿ ಮಹಾಂತೇಶ ಪಾಟೀಲ, ಸಮಾಜ ಸೇವಕ, ಬಿಜೆಪಿ ಮುಖಂಡ ಸತೀಶ ಪಾಟೀಲರಿಗೆ ಮಾತೃ ವಿಯೋಗ..!
ಬೆಳಗಾವಿ : ಖಾಸಬಾಗ ಬಜಾರ್ ಗಲ್ಲಿಯ ಪ್ರಸಿದ್ಧ ಪಾಟೀಲ ಮನೆತನದ ಹಿರಿಯರಾದ ಶ್ರೀಮತಿ ಸುಮಿತ್ರಾ ಕೆ ಪಾಟೀಲ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಬೆಳಗಿನ ಜಾವ 2 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರಿಗೆ ಪತಿ, ಮೂವರು ಸುಪುತ್ರರು, ಎಕಸ್ ಕಂಪನಿಯ ಮಹಾಂತೇಶ ಪಾಟೀಲ , ಸಮಾಜ ಸೇವಕ, ಬಿಜೆಪಿ ಮುಖಂಡರಾದ ಸತೀಶ ಪಾಟೀಲ ಹಾಗೂ ಉಮೇಶ ಪಾಟೀಲ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು , ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಇವರ ಅಂತ್ಯಕ್ರಿಯೆ ಇಂದು ಸಂಜೆ 4.00 ಗಂಟೆಗೆ ಲಿಂಗಾಯತ ರುದ್ರಭೂಮಿ, ಯಡಿಯೂರಪ್ಪ ಮಾರ್ಗ, ಖಾಸಬಾಗದಲ್ಲಿ ನೆರವೇರಲಿದೆ.